ಮಾಂಸಕ್ಕೆ ಮುಗಿಬಿದ್ದವರಿಗೆ ಲಾಠಿ ರುಚಿ

12cmy1
Published on

ಚಿಂತಾಮಣಿ: ಸಂಡೇ ಕರ್ಪ್ಯೂ ಉಲ್ಲಂಸಿ ಪರಸ್ಪರ ಅಂತರ ಕಾಪಾಡದೇ ನಗರದ ಬೊಂಬು ಬುಜಾರ್ ರಸ್ತೆಯಲ್ಲಿ ಮಾಂಸ ಖರೀದಿಗೆ ಮುಗಿಬಿದ್ದಿದ್ದ ಜನರಿಗೆ ಪೊಲೀಸರ ಲಾಠಿ ರುಚ ತೋರಿಸಿ ಚದುರಿಸಿದರು.

ಮಾಂಸದಂಗಡಿಗಳ ಎದುರು ಜನಜುಂಗುಳಿ ಸೇರಿದ್ದಲ್ಲದೆ ರಸ್ತೆ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸಂಚಾರಕ್ಕೂ ತೊಂದರೆಯಾಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋದ ಪೊಲೀಸರು ಜನರನ್ನು ಚದುರಿಸಿದರು.

ನಗರದಾದ್ಯಂತ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು, ಸರಕು ಸಾಗಣೆ ವಾಹನಗಳ ಸಂಚಾರವೂ ವಿರಳವಾಗಿತ್ತು, ಸಂಡೇ ಕರ್ಪ್ಯೂಗೆ ಬೆಂಬಲ ವ್ಯಕ್ತವಾಯಿತು.

ಭಾನುವಾರದ ಸಂತೆಗಳಾದ ಎಪಿಎಂಸಿ ದವಸಧಾನ್ಯ ಮಾರುಕಟ್ಟೆ, ಜಾನವಾರು ಮಾರುಕಟ್ಟೆ ಸಹ ಸ್ಥಗಿತಗೊಂಡಿತ್ತು, ಟೊಮ್ಯಾಟೊ, ತರಕಾರಿ ಸಂತೆ ಬಹಿರಂಗ ಹರಾಜು ಮತ್ತು ತರಕಾರಿ ಸಾಗಕ್ಕೆ ಅನುವು ಮಾಡಿಕೊಡಲಾಗಿತ್ತು, ಹಾಲು ಮತ್ತು ತರಕಾರಿ, ಔಷಧ ಮಾರಾಟಕ್ಕೆ ಬೆಳಗ್ಗೆ 11 ಗಂಟೆ ವರೆಗೂ ಅವಕಾಶ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net