ಮಾಂಸ ಖರೀದಿಗೆ ಮುಗಿಬಿದ್ದ ಜನ

h12-Chicken Vidyanagar 2
Published on

ಹುಬ್ಬಳ್ಳಿ: ಭಾನುವಾರದ ಬಾಡೂಟ ತಯಾರಿಗಾಗಿ ಮಾಂಸ ಖರೀದಿಸಲು ನಗರದ ವಿವಿಧೆಡೆ ನೂರಾರು ಸಂಖ್ಯೆಯಲ್ಲಿ ಜನ ಚಿಕನ್, ಮಟನ್ ಅಂಗಡಿಗಳಿಗೆ ಭಾನುವಾರ ಮುಗಿ ಬಿದ್ದಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ತೋರಿಸಿದರು.

ಕೇಶ್ವಾಪುರದ ಬಳ್ಳಾರಿ ಮಟನ್ ಆಂಡ್ ಚಿಕನ್ ಶಾಪ್, ವಿದ್ಯಾನಗರದ ರೇಣುಕಾ ಚಿಕನ್ ಸೆಂಟರ್ ಹಾಗೂ ಕಾರವಾರ ರಸ್ತೆಯ ಮಿಷನ್ ಕಾಂಪೌಂಡ್ ಬಳಿ ಮಾಂಸ ಖರೀದಿಗೆ ಜನ ಜಮಾಯಿಸಿದ್ದರು. ಮಾಂಸ ಖರೀದಿ ಭರಾಟೆಯಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದರು. ಗುಂಪು ಗುಂಪಾಗಿ ನಿಂತಿದ್ದರು.

ಕೇಶ್ವಾಪುರ ಸವೋದಯ ವೃತ್ತದ ಮಟನ್ ಅಂಗಡಿಯಲ್ಲಿ ನಿಯಮ ಉಲ್ಲಂಘಿಸಿ ಗುಂಪು ಗುಂಪಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಪಾಲಿಕೆ ಅಧಿಕಾರಿಗಳು ಬಂದ್ ಮಾಡಿಸಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು ಹಾಗೂ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡರು.

ಮಟನ್ ಅಂಗಡಿ ಬಂದ್: ಹುಬ್ಬಳ್ಳಿ: ಜನದಟ್ಟಣೆ ಸೇರಿದ್ದರಿಂದ ಪಾಲಿಕೆ ಅಧಿಕಾರಿಗಳು ಭಾನುವಾರ ಬೆಳಗ್ಗೆ ಕೇಶ್ವಾಪುರ ಸವೋದಯ ವೃತ್ತದಲ್ಲಿ 2 ಹಾಗೂ ಗದಗ ರಸ್ತೆಯಲ್ಲಿ 1 ಮಾಂಸ (ಮಟನ್) ಮಾರಾಟದ ಅಂಗಡಿಯನ್ನು ಬಂದ್ ಮಾಡಿಸಿದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಹೋಂ ಡೆಲಿವರಿ ಮೂಲಕ ಮಾಂಸ ಮಾರಾಟಕ್ಕೆ ಅವಕಾಶವಿದ್ದವು. ಆದರೆ, ಇವೆರಡೂ ಅಂಗಡಿಗಳ ಮುಂದೆ ಭಾನುವಾರದ ನಿಮಿತ್ತ ಜನದಟ್ಟಣೆಯೇ ಸೇರಿತ್ತು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಸ್ಥಳಕ್ಕೆ ತೆರಳಿ ಪಾಲಿಕೆ ಅಧಿಕಾರಿಗಳು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net