ಮಾ.೬ ರಂದು ಐತಿಹಾಸಿಕ ಹೋಳಿಗೆ ಚಾಲನೆ

holi
ಬಾಗಲಕೋಟೆ ಹೋಳಿ
Published on

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಹೋಳಿ ಉತ್ಸವ ಮಾ.೬ ರಂದು ನಗರದ ವಲ್ಲಭಾಯಿ ಚೌಕನಲ್ಲಿ ಚಾಲನೆ ದೊರೆಯಲಿದೆ ಎಂದು ಬಾಗಲಕೋಟೆ ಹೋಳಿ ಉತ್ಸವ ಆಚರಣಾ ಸಮಿತಿ ತಿಳಿಸಿದೆ.

ಮಾ.೭ ರಂದು ಬೆಳಗ್ಗೆ ೫ ಗಂಟೆಗೆ ಕಿಲ್ಲಾ ಓಣಿಯಲ್ಲಿ ಕಾಮ ದಹನಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ಬೆಳಗ್ಗೆ ೧೦ ಗಂಟೆಗೆ ಸಂಜೆ ೬ ಗಂಟೆ ವರೆಗೆ ಹಳಪೇಟ, ಜೈನಪೇಟ, ವೆಂಕಟಪೇಟ ಸೇರಿದಂತೆ ವಿವಿಧೆಡೆ ಕಾಮ ದಹನ ನಡೆಯಲಿದೆ. ಮಾ.೮ ರಂದು ಬೆಳಗ್ಗೆ ೧೦ ಗಂಟೆಗೆ ವಿದ್ಯಾಗಿರಿ ನವನಗರದಲ್ಲಿ ಬಣ್ಣದಾಟ, ಮಾಧ್ಯಾಹ್ನ ೨ ಗಂಟೆಗೆ ಕಿಲ್ಲಾ ಓಣಿಯ ಬಣ್ಣದಾಟ ಜರುಗಲಿದೆ. ಮಾ.೯ ರಂದು ಹಳೇಪೇಟ, ಜೈನಪೇಟ, ವೆಂಕಟಪೇಟೆ, ಮಾ.೧೦ ರಂದು ಹೊಸಪೇಟ ಬಣ್ಣದಾಟ ನಡೆಯಲಿದೆ. ಅಲ್ಲದೆ ಮಾ.೭ ರಂದು ಕಿಲ್ಲಾ, ಮಾ.೮ ರಂದು ಹಳಪೇಟ, ಮಾ.೯ ರಂದು ಹೊಸಪೇಟ, ಮಾ.೧೦ ರಂದು ಜೈನಪೇಟ, ಮಾ.೧೧ ರಂಧು ವೆಂಕಟಪೇಟ ಓಣಿಯ ಸೊಗಿನ ಬಂಡಿಗಳ ಮೆರವಣಿಗೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಕಳಕಪ್ಪ ಬಾದವಾಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಅನುದಾನ ಬಳಕೆ ಮಾಡಿಲ್ಲ:
ಕಳೆದ ವರ್ಷ ಸರ್ಕಾರ ಹೋಳಿ ಆಚರಣೆಗೆ ಬಿಡುಗಡೆ ಮಾಡಿದ್ದ ೧೦ ಲಕ್ಷ ರೂ.ಅನುದಾನ ಬಳಕೆ ಮಾಡಿಲ್ಲ. ಎಲ್ಲರ ಒಟ್ಟಾಭಿಪ್ರಾಯ ಮೂಡದ ಪರಿಣಾಮ ಅದು ಸಾಧ್ಯವಾಗಲಿಲ್ಲ. ಬಹಳಷ್ಟು ಜನ ಹಣ ಉಪಯೋಗಿಸಿದ್ದಾರೆ ಎನ್ನುವುದು ತಪ್ಪು ಕಲ್ಪನೆ. ಜಿಲ್ಲಾಽಕಾರಿಗಳ ಖಾತೆಯಲ್ಲಿ ಹಣ ಜಮೆ ಇದೆ. ಇನ್ನು ಫೆ.೧೭ ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಽಕಾರಿಗಳಿಗೆ ಭೇಟಿ ಮಾಡಿ ಪ್ರಸಕ್ತ ವರ್ಷ ಅನುದಾನ ಬಳಕೆಗೆ ಮನವಿ ಸಲ್ಲಿಸಲಾಗಿದೆ. ಕ್ರಿಯಾ ಯೋಜನೆ ತಯಾರಿಸಲು ವಿನಂತಿ ಮಾಡಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net