ಮಾ.೨೩ ರಂದು ಲಿಂಗ ದೀಕ್ಷೆ, ಲಿಂಗ ಪೂಜೆ

bkt-21-6
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿನಯ ನಾವಲಗಿ, ಮಹಾಂತೇಶ ಜೋಳದ, ಮೇಘಾ ಜಿಗಜಿನ್ನಿ, ಶಿವಲೀಲಾ ಪಟ್ಟಣಶೆಟ್ಟಿ, ಚೈತ್ರ ಕುಮಟಗಿ ಇತರರು ಇದ್ದರು.
Published on

ಬಾಗಲಕೋಟೆ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬಾಗಲಕೋಟೆ ತಾಲೂಕಾ ಯುವ ಘಟಕ, ಮಹಿಳಾ ಘಟಕ ನೇತೃತ್ವದಲ್ಲಿ ಮಾ. ೨೩ ರಂದು ನಗರದ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಲಿಂಗ ದೀಕ್ಷೆ, ಲಿಂಗ ಪೂಜೆ ಹಾಗೂ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ ಹೇಳಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೭ ಗಂಟೆಯಿAದ ಕಾರ್ಯಕ್ರಮ ಆರಂಭವಾಗಲಿದ್ದು, ಚಿತ್ತರಗಿ ಸಂಸ್ಥಾನಮಠದ ಮ.ನಿ.ಪ್ರ ಗುರು ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಣಜಿಗ ಕ್ಷೇಮಾ ಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೈಲಜಾ ಎಂ.ಕೌಜಗೇರಿ ಅವರು ಆಗಮಿಸಲಿದ್ದಾರೆ. ಸಂಘದ ಬಾಗಲಕೋಟೆ ತಾಲೂಕಾ ಅಧ್ಯಕ್ಷ ಬಸವರಾಜ ಶೀಲವಂತರ, ಯುವ ಘಟಕದ ತಾಲೂಕಾ ಅಧ್ಯಕ್ಷ ವಿನಯ ಕುಮಾರ ನಾವಲಗಿ, ಮಹಿಳಾ ಘಟಕದ ಗೌರವ ಉಪಾಧ್ಯಕ್ಷೆ ಶಂಕ್ರಮ್ಮ ಮುಚಂಡಿ, ಮಹಿಳಾ ಘಟಕದ ತಾಲೂಕಾ ಉಪಾಧ್ಯಕ್ಷೆ ಮೇಘಾ ಆನಂದ ಜಿಗಜಿನ್ನಿ ಉಪಸ್ಥಿತರಿರುವರು.

ಅಂದು ಬೆಳಗ್ಗೆ ೭ ಗಂಟೆಗೆ ಸಾಮೂಹಿಕ ಲಿಂಗಪೂಜೆ, ಲಿಂಗ ದೀಕ್ಷೆ ನಡೆಯಲಿದೆ. ಬೆಳಗ್ಗೆ ೯.೩೦ ಗಂಟೆಗೆ ಅಲ್ಪೋಪಹಾರ ಬಳಿಕ ವಿಶೇಷ ಸಾಧಕರಿಗೆ ಸನ್ಮಾನ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ೧೦.೩೦ ಗಂಟೆಗೆ ಮಹಿಳಾ ದಿನಾಚರಣೆ ಅಂಗವಾಗಿ ಜಾನಪದ ಗೀತೆ, ಆಟ ಗಳು, ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಉಪಾಧ್ಯಕ್ಷ ಸಂಗಮೇಶ ಅಂಗಡಿ ಮಾತನಾಡಿ, ಉದ್ಯಮ, ಉದ್ಯೋಗ ಮೇಳ, ಆರೋಗ್ಯ ಶಿಬಿರ, ಸೆಮಿನಾರ್‌ಗಳು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಯುವ ಘಟಕದಿಂದ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮುಖಂಡರಾದ ವಿನಯ ನಾವಲಗಿ, ಮಹಾಂತೇಶ ಜೋಳದ, ಮೇಘಾ ಜಿಗಜಿನ್ನಿ, ಶಿವಲೀಲಾ ಪಟ್ಟಣಶೆಟ್ಟಿ, ಚೈತ್ರ ಕುಮಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net