ಮಾ.8ರಿಂದ ನೇತ್ರ ತಪಾಸಣೆ ಶಿಬಿರ

24Hukkeri1
ಹುಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಿಖಿಲ ಕತ್ತಿ ಮಾತನಾಡಿದರು. ಶ್ರೀಶೈಲಪ್ಪ ಮಗದುಮ್ಮ, ಪಥ್ವಿ ಕತ್ತಿ, ಪವನ ಕತ್ತಿ, ರಾಜೇಂದ್ರ ಪಾಟೀಲ, ಎ.ಕೆ.ಪಾಟೀಲ, ಕಲಗೌಡ ಪಾಟೀಲ ಇತರರಿದ್ದರು.
Published on

ಹುಕ್ಕೇರಿ: ಸಹಕಾರಿ ಜನನಾಯಕ ದಿ.ವಿಶ್ವನಾಥ ಕತ್ತಿ ಮತ್ತು ದಿ.ರಾಜೇಶ್ವರಿ ಕತ್ತಿ ಧರ್ಮಾರ್ಥ ಟ್ರಸ್ಟ್ ವತಿಯಿಂದ ಮಾಜಿ ಸಚಿವ ದಿ.ಉಮೇಶ ಕತ್ತಿ ಜನ್ಮದಿನದ ಅಂಗವಾಗಿ ಮಾ.8ರಿಂದ 10ರವರೆಗೆ ನೇತ್ರ ಉಚಿತ ತಪಾಸಣೆ ಶಿಬಿರ ಹಾಗೂ ಕಣ್ಣಿನ ಪೊರೆ ಶಸಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಹಿರಾ ಶುಗರ್ಸ್‌ ಅಧ್ಯಕ್ಷ ನಿಖಿಲ ಕತ್ತಿ ಹೇಳಿದರು.

ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಹಾಗೂ ಕತ್ತಿ ಕುಟುಂಬದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನ ಶಿಬಿರ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮತ್ತು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪಥ್ವಿ ಕತ್ತಿ ಮಾತನಾಡಿ, ಬ್ರಿಟಿಷರ ವಿರುದ್ಧ ಸಮರ ಸಾರಿದ ಮೊದಲ ಮಹಿಳೆ ರಾಣಿ ಚನ್ನಮ್ಮಳ ಜೀವನಾಧಾರಿತ ನಾಟಕವನ್ನು ಮಾ.1 ಮತ್ತು 2ರಂದು ಸ್ಥಳೀಯ ಎಸ್.ಕೆ. ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ ಮಾತನಾಡಿ, 7ರಿಂದ 8 ಲಕ್ಷ ರೂ. ಬೆಲೆ ಬಾಳುವ ನೇತ್ರ ಚಿಕಿತ್ಸೆಗೆ ಬಳಸುವ ಅತಿಸೂಕ್ಷ್ಮ ಯಂತ್ರವನ್ನು ದಿ.ಉಮೇಶ ಕತ್ತಿ ಸರ್ಕಾರಿ ಆಸ್ಪತ್ರೆಗೆ ಒದಗಿಸಿದ್ದಾರೆ ಎಂದರು. ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ, ಸಂಗಮ ಶುಗರ್ಸ್‌ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾ ಶುಗರ್ಸ್‌ ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ಪ್ರಭುಗೌಡ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ಅಜ್ಜಪ್ಪ ಕಲ್ಲಟ್ಟಿ, ರಾಯಪ್ಪ ಡೂಗ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕ ರಮೇಶ ಕುಲಕರ್ಣಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಭಾಷ ಪಾಟೀಲ, ಶೀತಲ ಬ್ಯಾಳಿ, ಮಹಾವೀರ ನಿಲಜಗಿ, ಸುನೀಲ ನೇರ್ಲಿ, ಮಹಾನಿಂಗ ಸನದಿ, ಸುನೀಲ ಪರ್ವತರಾವ, ಬಸವೇಶ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net