

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೆ ಊರಿನ ಶ್ರೀ ಕಲ್ಲೇಶ್ವರ ಸ್ವಾಮಿಯ 67ನೇ ವರ್ಷದ ರಥೋತ್ಸವ ಮಾ.2ರಂದು ನಡೆಯಲಿದ್ದು, ಶನಿವಾರ ತೇರಿನ ಗಾಲಿಯನ್ನು ಹೊರಗೆ ತರಲಾಯಿತು.
ಫೆ.26ರಂದು ಶಿವರಾತ್ರಿ ನಿಮಿತ್ತ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಫೆ.28ರಂದು ರಥದ ಕಲಶ ಸ್ಥಾಪನೆ ಮಾಡಲಾಗುತ್ತದೆ. ಮಾ.1ರಂದು ರಾತ್ರಿ ಮೂರ್ತಿಯ ಉತ್ಸವ ನಡೆಯಲಿದೆ. ಮಾ.2ರಂದು ಸಂಜೆ 5ಗಂಟೆಗೆ ರಥೋತ್ಸವ ಜರುಗಲಿದೆ.
ಈ ವೇಳೆ ಸೇವಾ ಸಮಿತಿಯವರಾದ ಹಾಲ್ದಾಳ್ ವಿಜಯಕುಮಾರ, ಮಠದ ಕೊಟ್ರಯ್ಯಸ್ವಾಮಿ, ಪೂಜಾರ್ ಶ್ಯಾಮಪ್ಪ, ಖಾನಾವಳಿ ಬಸವರಾಜ, ಚಿತ್ತವಾಡ್ಗಿ ಕಲ್ಲೇಶ, ರೆಡ್ಡಿರ್ ಕೊಟ್ರೇಶ, ಉಪ್ಪಾರ ಸುರೇಶ, ಚಿತ್ತವಾಡ್ಗಿ ಮಹೇಶ, ಬಡಿಗೇರ್ ಶರಣಪ್ಪ ಮತ್ತಿತರರು ಇದ್ದರು.