ಮಾ.29 ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

Published on
ಚಾಮರಾಜನಗರ: ಚಾ.ನಗರ ನಗರಸಭೆಗೆ ಸೇರಿದ ಟಿ.ನರಸೀಪುರ ಕೆಳಮಟ್ಟದ ಯಂತ್ರಗಾರದಲ್ಲಿ ಮಾ.28 ರಂದು ಬೆಳಿಗ್ಗೆ 11 ಗಂಟೆಯಲ್ಲಿ 750 ಎಚ್.ಪಿ ಸಾಮರ್ಥ್ಯದ ಪಂಪ್ ಮೋಟಾರ್ ಶಾಫ್ಟ್ ದುರಸ್ಥಿಯಾಗಿದೆ.
ಆದಕಾರಣ ಮಾ.29 ರಂದು ಒಂದು ದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕದ ನಗರಸಭೆಯೊಂದಿಗೆ ಸಹಕರಿಸಬೇಕಾಗಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net