ಮಾ.21, 22ರಂದು ಉಡಿಗಾಲದಲ್ಲಿ ಹಬ್ಬ

Published on

ಚಾಮರಾಜನಗರ: ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಮಾ.21 ಮತ್ತು 22ರಂದು ಪಟ್ಟಲದಮ್ಮ ಜಾತ್ರ ನಡೆಯಲಿದೆ.

ಮಾ.21ರಂದು ಮಧ್ಯಾಹ್ನ 3.30ಕ್ಕೆ ಬಂಡಿ ಉತ್ಸವ, ರಾತ್ರಿ 10 ಗಂಟೆಗೆ ಪಟ್ಟಲದಮ್ಮನ ಕೇಲು, ರಾತ್ರಿ 12 ಗಂಟೆಗೆ ಮದ್ದಿನ ಪ್ರದರ್ಶನ ನಡೆಯಲಿದೆ. ಮಾ.22ರಂದು ಬೆಳಗಿನ ಜಾವ 5 ಗಂಟೆಗೆ ಕೊಂಡೋತ್ಸವ, 7.30ಕ್ಕೆ ಪಟ್ಟಲದಮ್ಮನ ಉತ್ಸವ ಮೂರ್ತಿಗಳನ್ನು ಕುದುರೆ ವಾಹನದ ಮೇಲೆ ಇಟ್ಟು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಬಳಿಕ ಬೃಹತ್ ರಥದ ಮೇಲೆ ಕೂರಿಸಿ ರಥೋತ್ಸವ ನಡೆಸಲಾಗುವುದು ಎಂದು ಪಟ್ಟಲದಮ್ಮ ಜಾತ್ರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net