ಮಾ.1ಕ್ಕೆ ಸೇವಾಲಾಲ್ ಜಯಂತ್ಯುತ್ಸವ

PHOTO-2 (1)--00001
Published on

ಚಿತ್ರದುರ್ಗ: ನಗರದ ಬಂಜಾರ ಭವನದಲ್ಲಿ ಸರ್ದಾರ್ ಸೇವಾಲಾಲ್ ಅವರ 285ನೇ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲದ ಹಿನ್ನೆಲೆಯಲ್ಲಿ ಸಮಾರಂಭವನ್ನು ಸರಳವಾಗಿ ಆಚರಿಸಲಾಗುವುದು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು
ಹೊಸದುರ್ಗದಲ್ಲಿ ಫೆ.29ರಂದು ಏರ್ಪಡಿಸಿರುವ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಮತಾಂತರದ ವಿರುದ್ಧ ತಾಂಡಾಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುವುದು. ಮತಾಂತರದಿಂದ ಲಂಬಾಣಿ ಸಂಸ್ಕೃತಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದಿನಿಂದಲೂ ರಾಜಕೀಯವಾಗಿ ನಮ್ಮ ಸಮಾಜವನ್ನು ನಿರ್ಲಕ್ಷಿಸಲಾಗುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷಗಳನ್ನು ಒತ್ತಾಯಿಸಿದರು.
ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ಮಾ.1ರ ಬೆಳಗ್ಗೆ 11.30ಕ್ಕೆ ನಗರದ ನೀಲಕಂಠೇಶ್ವರಸ್ವಾಮಿ ದೇವಾಲಯದಿಂದ ಬಂಜಾರ ಭವನದವರೆಗೆ ಮೆರವಣಿಗೆ, ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶ್ರೀ ಸೇವಾಲಾಲ್ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಡಾ.ಜ್ಯೋತಿಬಾಯಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ತಣಿಗೆಹಳ್ಳಿ ಉಮಾಪತಿ, ಅನಂತಮೂರ್ತಿನಾಯ್ಕ, ಸಿದ್ದೇಶ್‌ನಾಯ್ಕ, ಪ್ರವೀಣ್‌ಸಿಂಗ್, ಪರಮೇಶ್‌ನಾಯ್ಕ, ಸಂತೋಷ್ ಮತ್ತಿತರ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net