ಮೈಸೂರು-ಬೆಂಗಳೂರು ನಡುವಿನ ದಶಪಥ ಹೆದ್ದಾರಿಯನ್ನು ಮಾ. 11ರಂದು ಪ್ರಧಾನಿ ನರೇಂದ್ರಮೋದಿ ಮಂಡ್ಯ ನಗರದಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ ನಿರ್ಮಾಣಕ್ಕೂ ಭೂಮಿಪೂಜೆ ನಡೆಯಲಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಮಂಡ್ಯ ಜಿಲ್ಲೆಯವರು ಬಿಜೆಪಿಯನ್ನು ಗೆಲ್ಲಿಸಿಲ್ಲ. ಹೀಗಿದ್ದರೂ ನಾವೇನು ತಾರತಮ್ಯ ಮಾಡಿಲ್ಲ. ಮಂಡ್ಯ ಜಿಲ್ಲೆಗೂ ಪೂರಕವಾದ ಅಭಿವೃದ್ಧಿ ಮಾಡುತ್ತಿದ್ದೇವೆ. ಬೆಂಗಳೂರು-ಮೈಸೂರು ಹೆದ್ದಾರಿಗೆ ಕಾವೇರಿ ಎಕ್ಸ್‌ಪ್ರೆಸ್ ಹೈವೇ ಹೆಸರಿಡಲು ಸಹಕಾರ ಕೇಳುತ್ತೇನೆ ಎಂದರು.