ಮಹೇಶ್ ಮತ್ತು ಮುರಳಿ ಅವಿರೋಧ ಆಯ್ಕೆ

15Rajesh3
Published on

ಚಾಮರಾಜನಗರ: ಮರ್ಚೆಂಟ್ಸ್ ಸೌಹಾರ್ದ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿ.ಮಹೇಶ್‌ಕುಮಾರ್ ಮತ್ತು ಆರ್.ಮುರಳಿ ಅವಿರೋಧ ಆಯ್ಕೆಯಾದರು.

ನಗರದ ರಥದ ಬೀದಿಯ ತರಕಾರಿ ಮಾರುಕಟ್ಟೆ ಹಿಂಭಾಗದ ಇರುವ ಕಚೇರಿಯಲ್ಲಿ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ಚುನಾವಣಾ ಅಧಿಕಾರಿ ಎಸ್.ಪಿ, ರವಿಪ್ರಸಾದ್ ಕರ್ತವ್ಯ ನಿರ್ವಹಿಸಿದರು.

ನಿರ್ದೇಶಕರಾದ ರಂಗರಾಜು, ರಾಜು ವರ್ಗೀಸ್, ಲೋಕೇಶ್, ಬಿ.ವಿ.ಶ್ರೀನಾಥ್, ಎಸ್.ಸುರೇಶ್, ವೆಂಕಟರಾವ್, ಜೆ.ವರ್ಷ, ಣಿರಾಜ್, ಸಯೈದ್ ಅಲ್ತಾಫ್, ಸುಮಿತ್ರಾ, ಶೋಭಾ ಕುಮಾರಿ, ವಿಜಯ ಕುಲಾಲ್, ಜಯಲಕ್ಷ್ಮಮ್ಮ, ಶಿವಣ್ಣ, ಸೊಸೈಟಿಯ ಸಿಇಒ ಎನ್.ರಶ್ಮಿ, ಮುಖ್ಯಲೆಕ್ಕಾಧಿಕಾರಿ ಅಂಜಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net