ಮಹೇಶಗೆ ಅತ್ಯಂತ ಪ್ರಭಾವಶಾಲಿ ಯುವ ನಾಯಕ ಪ್ರಶಸ್ತಿ

Capture2
Published on

ಹುಮನಾಬಾದ್: ಪಟ್ಟಣದ ಶಿವನಗರ ನಿವಾಸಿ, ಮೂಲತ ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಮಹೇಶ ಪಾಟೀಲ್ ಅವರಿಗೆ ಏಷ್ಯಾದ ಅತ್ಯಂತ ಪ್ರಭಾವಶಾಲಿ ಯುವ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹೇಶ ಪಾಟೀಲ್ ಸದ್ಯ ಅಬುದಾಬಿ (ಯುಎಇ) ಹಾರಿಜಾನ್ ತೈಲ ಮತ್ತು ಅನಿಲ ಸಂಸ್ಥೆಯಲ್ಲಿ (ಆಯಿಲ್ ಆ್ಯಂಡ್ ಗ್ಯಾಸ್) ವ್ಯವಸ್ಥಾಪಕ ನಿದರ್ೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸುಮಾರು 14 ವರ್ಷಗಳಿಂದ ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದು, ಅತ್ಯುತ್ತಮ ಸೇವೆಯನ್ನು ಗುರುತಿಸಿ(Asia's Most Influential Young Leader) by Asia One Greatest  Brands and Leaders 2021 -22 (Asia-Americas-Africa) ಪ್ರಶಸ್ತಿಯನ್ನು ನೀಡಲಾಗಿದೆ. ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ಭಾನುಪ್ರತಾಪಸಿಂಗ್ ವಮರ್ಾ ಪ್ರಶಸ್ತಿ ಪ್ರದಾನ ಮಾಡಿದರು.

ಹುಮನಾಬಾದ್ ಬಸ್ ಡಿಪೋದಲ್ಲಿ ಕಂಡಕ್ಟರ್ ಸೇವೆ ಸಲ್ಲಿಸುತ್ತಿರುವ ಭೀಮರಾವ ಪಾಟೀಲ್ ಅವರ ಪುತ್ರರಾಗಿರುವ ಮಹೇಶ ಪಾಟೀಲ್ ಇಲ್ಲಿನ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಬೀದರ್ನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. ನಂತರ ದುಬೈನಲ್ಲಿ ಎಂಬಿಎ ಕೋಸರ್್ ಪೂರೈಸಿದ್ದಾರೆ. ಬಿಬಿಎ ಪದವಿ ನಂತರ ಕೆಲ ಕಾಲ ಹುಮನಾಬಾದ್ ಜಿಪಂ ಉಪವಿಭಾಗ ಕಚೇರಿಯಲ್ಲಿ ಖಾಸಗಿಯಾಗಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net