

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಮಹಿಷ ಮರ್ದಿನಿ ಚಾಮುಂಡೆಶ್ವರಿ ವಧರ್ಂತಿ ಮಹೋತ್ಸವ ಅಂಗವಾಗಿ ದೇವಿಯ ಭಕ್ತರು ಪೂಜಾ ಕಾರ್ಯಕ್ರಮಗಳನ್ನು ಸಡಗರ ಸಂಭ್ರಮದಿಂದ ಮಾಡಿದರು.
ಪಟ್ಟಣದ ಮೈಸೂರು ಮುಖ್ಯರಸ್ತೆಯ ಶಾಂತಿ ಕಾಲೇಜು ಸಮೀಪ ಎನ್‌ಇಎಸ್ ಗೆಳೆಯರ ಬಳಗದ ಯುವಕರು ನಾಲ್ಕನೇ ವರ್ಷದ ಚಾಮುಂಡೇಶ್ವರಿ ವಧರ್ಂತಿಯನ್ನು ವಿಜೃಂಭಣೆಯಿಂದ ಹಮ್ಮಿಕೊಂಡಿದ್ದು, ಬ್ರಾಹ್ಮಣೋತ್ತಮ ಪೌರೋಹಿತರ ತಂಡದವರು ದೇವಿ ಕಂಚಿನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿವಿಧ ಬಗೆಯ ಹೂಗಳಿಂದ ದೇವಿಯನ್ನು ಅಲಂಕೃತಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಿಂದ ನೂರಾರು ಜನರು ಆಗಮಿಸಿ ದೇವಿಯ ದರ್ಶನ ಪಡೆದು ಭಕ್ತಿ ಪರವಶರಾದರು. ನೆರೆದವರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ವಿವಿಧೆಡೆಗಳಲ್ಲೂ ದೇವಿಯ ಪ್ರತಿಷ್ಠಾಪನೆ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು.
ತಾಲೂಕಿನ ವಿವಿಧ ಗ್ರಾಮಗಳಲ್ಲೂ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಜನ್ಮ ದಿನವನ್ನು ದೇವಿಯ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.