ಮಹಿಳೆಯರೇ ಭವ್ಯ ಸಂಸ್ಕೃತಿ ರಕ್ಷಕರು

klb3
ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಹಾಗೂ ಶ್ರೀದೇವಿ ಮಹಾತ್ಮೆ ಪುರಾಣ ಮಂಗಲ ಸಮಾರಂಭವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉದ್ಘಾಟಿಸಿದರು. ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಸಿದ್ರಾಮಪ್ಪಗೌಡ ಪಾಟೀಲ್, ಮಲ್ಹಾರರಾವ ಕುಲಕರ್ಣಿ, ಬಾಬಾ ಫರೀದ್ ಮಳ್ಳೀಕರ, ಕಿರಣ ದೇಸಾಯಿ, ಶರಣಗೌಡ ಸೋಮಪ್ಪಗೋಳ, ನಾಗನಗೌಡ ಶಹಾಪುರ ಇದ್ದರು.
Published on

ಯಡ್ರಾಮಿ: ನವರಾತ್ರಿ ವೇಳೆ ನಮ್ಮ ಪೂರ್ವಜರಿಂದ ನಡೆದುಕೊಂಡು ಬರುತ್ತಿರುವ ಆಚರಣೆಗಳನ್ನು ಮುಂದುವರಿಸಿಕೊAಡು ಹೋಗುವುದರ ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಶ್ರೇಷ್ಠ ಕಾರ್ಯ ಸ್ತಿçÃಯರಿಂದಾಗುತ್ತಿದೆ. ಮಹಿಳೆಯರೇ ನಮ್ಮ ಸಂಸ್ಕೃತಿ, ಪರಂಪರೆಯ ರಕ್ಷಕರಾಗಿದ್ದಾರೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.

ದೇಸಾಯಿ ಲೇಔಟ್‌ನಲ್ಲಿ ಶ್ರೀ ಅಂಬಾಭವಾನಿ ದೇವಸ್ಥಾನ ಸಮಿತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ದಸರಾ ಉತ್ಸವ ಹಾಗೂ ಶ್ರೀ ದೇವಿ ಮಹಾತ್ಮೆ ಪುರಾಣ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಜಗತ್ತಿನಲ್ಲಿಯೇ ದೇಶಕ್ಕೂ ಮಾತೆಯ ಸ್ಥಾನ ನೀಡಿದ್ದು ಭಾರತ ಮಾತ್ರ. ಭಾರತದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿದ್ದು, ಪ್ರತಿಯೊಬ್ಬರೂ ಸ್ತಿçÃಯರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ಭಾರತ ಶ್ರೇಷ್ಠ ಸಂಸ್ಕೃತಿ ಹೊಂದಿದ್ದು, ಇಡೀ ವಿಶ್ವವೇ ನಮ್ಮನ್ನು ಹಿಂಬಾಲಿಸುತ್ತಿದೆ. ಇಂದಿನ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ, ನಮ್ಮ ಶ್ರೇಷ್ಠ ಪರಂಪರೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ ಮನೆಯಲ್ಲಿ ತಂದೆ-ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಎಲ್ಲರೂ ಸೇರಿ ಯಶಸ್ವಿಯಾಗಿ ದಸರಾ ಉತ್ಸವ ಆಚರಿಸಿಕೊಂಡು ಬರುತ್ತಿರುವುದು ಖುಷಿ ತಂದಿದೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ ಮಾತನಾಡಿದರು.
ಪ್ರಮುಖರಾದ ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಸಿದ್ರಾಮಪ್ಪಗೌಡ ಪಾಟೀಲ್, ಮಲ್ಹಾರರಾವ ಕುಲಕರ್ಣಿ, ಬಾಬಾ ಫರೀದ್ ಮಳ್ಳೀಕರ, ಕಿರಣ ದೇಸಾಯಿ, ಶರಣಗೌಡ ಸೋಮಪ್ಪಗೋಳ, ನಾಗನಗೌಡ ಶಹಾಪುರ, ಶ್ರೀಶೈಲ ಪಾಟೀಲ್ ಕರಕಿಹಳ್ಳಿ, ಬಸವರಾಜ ಉಪ್ಪಾರ, ಮಲ್ಲಿಕಾರ್ಜುನ ನೀಲೂರ, ಸಿದ್ದು ಉಪ್ಪಾರ, ನಗರಾಜ ಉಪ್ಪಾರ, ಶಾಂತಗೌಡ ಸಾವಳಗಿ ಇತರರಿದ್ದರು.

ಸ್ಪರ್ಧೆ ವಿಜೇತರಿಗೆ ಬಹುಮಾನ: ದಸರಾ ಉತ್ಸವ ಪ್ರಯುಕ್ತ ಆಯೋಜಿಸಿದ್ದ 200 ಕೆಜಿ ಚೀಲ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕರೆಪ್ಪ ಹೊಸಮನಿಗೆ 50 ಗ್ರಾಂ ಬೆಳ್ಳಿ ಕಡೆ, ದ್ವೀತೀಯ ಸ್ಥಾನ ಪಡೆದ ಮಹಾಂತೇಶ ಗೊರಗುಂಡಗಿಗೆ 30 ಗ್ರಾಂ ಬೆಲ್ಲಿ ಕಡೆ ತೊಡಿಸಿ ಪ್ರೋತ್ಸಾಹಿಸಲಾಯಿತು. ದೇವಸ್ಥಾನದಲ್ಲಿ ಹತ್ತು ದಿನಗಳವರೆಗೆ ಪ್ರಸಾದ ಸೇವೆ ಸಲ್ಲಿಸಿದ ಭಕ್ತರನ್ನು ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net