

ಮದ್ದೂರು: ಸರ್ಕಾರದಿಂದ ದೊರೆಯುವ ಸಲವತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮಹಿಳಾ ಮಿಲನ್ ತಾಲೂಕು ಅಧ್ಯಕ್ಷೆ ಸೆಲ್ವಿ ಮುರಗೇಶ್ ತಿಳಿಸಿದರು.
ಪಟ್ಟಣದ ಮಹಿಳಾ ಮಿಲನ್ ಕಚೇರಿಯಲ್ಲಿ ಶನಿವಾರ ರಾಷ್ಟ್ರೀಯ ಕೊಳಚೆ ನಿವಾಸಿಗಳ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಪ್ರಸ್ತುತ ಎಲ್ಲ ರಂಗಗಳಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಹಿಳೆಯರು ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳಿಂದ ಸಾಲ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದು, ಸಂಘಗಳು ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ ಎಂದರು.
ಪುರಸಭಾ ಸದಸ್ಯೆ ರತ್ನತಿಮ್ಮಯ್ಯ, ಮಹಿಳಾ ಮಿಲನ್ ಪದಾಧಿಕಾರಿಗಳಾದ ಲಕ್ಷಮ್ಮ, ಯಶೋದಮ್ಮ, ಭಾಗ್ಯ, ಜಯಮ್ಮ ಇದ್ದರು.