

ಚಿಕ್ಕೋಡಿ: ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿರುವ ಸಮಾನತೆಯ ಹಕ್ಕನ್ನು ಪಡೆಯುವ ಮೂಲಕ ಮಹಿಳೆಯರು ಸಬಲರಾಗಲಿ ಎಂದು ವಕೀಲೆ ಸಂಪದಾ ಯಾದವ ಅಭಿಪ್ರಾಯಪಟ್ಟರು.
ತಾಲೂಕಿನ ಶಮನೇವಾಡಿ ಗ್ರಾಮದ ಬಿಆರ್‌ಎಂಇ ಬಿ.ಇಡಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಿಳೆಯರ ನ್ಯಾಯ ಮತ್ತು ಹಕ್ಕು ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಸಂವಿಧಾನ ಪುರುಷರಷ್ಟೇ ಸರಿಸಮನಾದ ಎಲ್ಲ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಮಹಿಳೆಯರು ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ. ಮಹಿಳಾ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಹಾಯವಾಣಿ ೧೧೮ನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯೆ ಡಾ.ಸುಜಾತ ಪೋಳ, ಡಾ.ಎನ್.ಸಿ.ಪಾಟೀಲ ಇತರರಿದ್ದರು. ಕಾವೇರಿ ಕಜಗರ ನಿರೂಪಿಸಿದರು.