ಮಹಿಳೆಯರು ಒಗ್ಗಟ್ಟಾಗಿ ಹೋರಾಟ ಮಾಡಬೇಕು

navanagar ladies day
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮಹಿಳೆಯರ ಪರವಾದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಪ್ರಗತಿಪರ ಚಿಂತಕಿ ಅಕ್ಷತಾ ಕೆ.ಸಿ. ಹೇಳಿದರು.

ನವನಗರದ ಶ್ರೀ ಚನ್ನಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಡಾ. ಚಂದ್ರಶೇಖರ ಕಂಬಾರ ದತ್ತಿ, ಶ್ರೀಮತಿ ನಾಗಮ್ಮ ಈರಪ್ಪ ಅಳಗುಂಡಗಿ ದತ್ತಿ, ದತ್ತಾತ್ರೇಯ ಕೃಷ್ಣಾಜಿ ಕುಲಕರ್ಣಿ ದತ್ತಿ ಹಾಗೂ ಶ್ರೀಮತಿ ಶಾಂತಾ ರಾಮಚಂದ್ರ ನಾಡಗೇರ ದತ್ತಿ ಉಪನ್ಯಾಸ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗೆ ಇನ್ನೂ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ನ್ಯಾಯ ಸಿಗದೇ ಇರುವುದು ವಿಷಾದನೀಯ. ಡಾ. ಅಂಬೇಡ್ಕರ್ ಅವರು ಮಹಿಳೆಯರ ಪರವಾಗಿ ಹೋರಾಡಿದ ವ್ಯಕ್ತಿ. ಮಹಿಳೆಯರ ಮೇಲೆ ನಿರಂತರವಾಗಿ ಅನ್ಯಾಯ, ಅತ್ಯಾಚಾರ ನಡೆಯುತ್ತಿರುವುದು ಖಂಡನೀಯ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಹಿಳಾ ಪರ ಸಂಘಟನೆಗಳು ಮಹಿಳಾ ಜಾಗೃತಿಗಾಗಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಉಮಾ ಅಳಗುಂಡಗಿ ಅವರು ಪಾಲಿಕೆ ಮಾಜಿ ಸದಸ್ಯ ದಿ.ವಿ. ಐ. ಅಳಗುಂಡಗಿ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಲು 25 ಸಾವಿರ ರೂ. ನೀಡಿದರು. ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ಎಸ್. ಹೊಸೂರ ಅಧ್ಯಕ್ಷತೆ ವಹಿಸಿದ್ದರು.

ಪೊ›. ಪರಶುರಾಮ ಕೆಂಗಾರ , ಎಸ್. ಕೆ. ಆದಪ್ಪನವರ, ಆರ್. ಟಿ. ಅಣ್ಣಿಗೇರಿ, ಶಾಂತಾ ನಾಡಿಗೇರ, ಮಂಜುಳಾ ಕುಲಕರ್ಣಿ, ಪದ್ಮಜಾ ಉಮರ್ಜಿ, ಸಂಧ್ಯಾ ದಿಕ್ಷೀತ, ಕೆ. ಎಸ್. ಕಬ್ಬೂರ, ಸೋಮಶೇಖರ ಇಟಗಿ, ಸುಮಂಗಲಾ ಅಂಗಡಿ, ಜಯಶ್ರೀ ಧಾರವಾಡ ಶೆಟ್ಟರ್, ಎಸ್. ಎಸ್. ಕರಡಿ, ಇತರರು ಇದ್ದರು.

ಪೊ›. ಕೆ. ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತ್ರಾವತಿ ಕುರುಬರ ಸ್ವಾಗತಿಸಿದರು. ಗಂಗಮ್ಮ ಶ್ಯಾಗೋಟಿ ವಂದಿಸಿದರು. ಅಕ್ಷತಾ ಕೆ. ಸಿ. ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net