ಮಹಿಳೆಯರು ಐಶ್ವರ್ಯದ ಸಂಕೇತ

02
Published on

ಕಕ್ಕೇರಾ : ಮಹಿಳೆಯರು ಮನೆಯ ಮಹಾಲಕ್ಷಿö್ಮÃ ಮತ್ತು ಐಶ್ವರ್ಯದ ಸಂಕೇತವಾಗಿದ್ದಾರೆ ಎಂದು ತಹಸೀಲ್ದಾರ್ ವಿಜಯಕುಮಾರ ಕೆ. ಹೇಳಿದರು.
ಇಲ್ಲಿನ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ವರಮಹಾಲಕ್ಷಿö್ಮÃ ಪೂಜೆ ನಿಮಿತ್ತ ಸರ್ಕಾರ ಸುಮಂಗಲಿಯರಿಗಾಗಿ ಶುಕ್ರವಾರ ಹಮ್ಮಿಕೊಂಡ ಹಸಿರು ಬಳೆ ಮತ್ತು ಅರಿಶಿಣ-ಕುಂಕುಮ ವಿತರಣಾ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ದೇವಸ್ಥಾನ ದರ್ಶನಕ್ಕೆ ಬರುವ ಮಹಿಳೆಯರಿಗೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆ ಹಾಗೂ ಹೂ ನೀಡಿ ಗೌರವಿಸಲಾಗುತ್ತಿದೆ ಎಂದರು.

ದೇವಸ್ಥಾನ ಅರ್ಚಕ ಮೌನೇಶ್ವರ ಸ್ವಾಮೀಜಿ, ದೇವಸ್ಥಾನ ಸಮಿತಿ ಸದಸ್ಯರಾದ ವೆಂಕಟೇಶ ಯರಡೋಣಿ, ಮಲ್ಲಪ್ಪ ಕುರ್ಲಿ, ಪದ್ಮಾವತಿ ವಿಶ್ವಕರ್ಮ, ದೇವಸ್ಥಾನ ಮೇಲ್ವಿಚಾರಕ ಶಿವಾನಂದಯ್ಯ ಸ್ವಾಮಿ, ಪ್ರಮುಖರಾದ ಗಂಗಾಧರ ನಾಯಕ, ಮಾನಯ್ಯ ಕವಾಲ್ದಾರ್, ಪರಮಣ್ಣ ಹುಣಸಿಹೊಳೆ, ಚಂದ್ರಶೇಖರ ಮುತ್ಯಾ ಕೊಡೇಕಲ್, ವೆಂಕಟೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net