ಮಹಿಳೆಯರಿಬ್ಬರ ಬರ್ಬರ ಹತ್ಯೆ

Crime Logo
Published on

ಕಲಬುರಗಿ: ತಾಲೂಕಿನ ತಾವರಗೇರಾ ಕ್ರಾಸ್ ಬಳಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ. ಕೂಲಿ ಕಾರ್ಮಿಕರಾಗಿದ್ದ ಕೇರಿ ಅಂಬಲಗಾದ ಶರಣಮ್ಮ (೫೪), ತಾಜಸುಲ್ತಾನಪುರ ಗ್ರಾಮದ ಚಂದಮ್ಮ (೫೫) ಕೊಲೆಗೀಡಾದವರು.
ನಿತ್ಯ ಕೂಲಿ ಕೆಲಸಕ್ಕೆಂದು ನಗರದ ಆಳಂದ ಚೆಕ್‌ಪೋಸ್ಟ್ ಬಳಿ ಬಂದು ಕೂಲಿ ಕೆಲಸಕ್ಕೆ ಕರೆದವರ ಜತೆಗೆ ಹೋಗುತ್ತಿದ್ದರು. ಭಾನುವಾರವೂ ಕೂಲಿ ಕೆಲಸಕ್ಕೆ ಬಂದಿದ್ದು, ತಾವರಗೇರಾ ಕ್ರಾಸ್ ಬಳಿಯ ಜಮೀನೊಂದರಲ್ಲಿ ಬರ್ಬರವಾಗಿ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ನಾಪತ್ತೆಯಾಗಿದ್ದಾರೆ.
ಘಟನೆ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಮೃತರ ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಸಬ್ ಅರ್ಬನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಗರದ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರ ಶವಗಳನ್ನು ರವಾನಿಸಿ, ಮರಣೋತ್ತರ ಪರಿಶೀಲನೆ ನಡೆಸಲಾಯಿತು. ಸ್ಥಳಕ್ಕೆ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net