ಮಹಿಳೆಯರಿಗೆ ಲಭಿಸಬೇಕು ಸಮಾನ ಸ್ಥಾನ

29 kpp 1 web
Published on

ಕೊಪ್ಪ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ಲಭಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕನ್ನಡ ಭವನದಲ್ಲಿ ಶನಿವಾರ ಕಸಾಪ ಮಹಿಳಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯಬೇಕು. ಪುರಷರಂತೆಯೇ ಮಹಿಳೆಯರು ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಕನ್ನಡ ಕೆಲಸದಲ್ಲಿ ಮಹಿಳೆಯರು ಭಾಗಿಯಾಗುತ್ತಿರುವುದು ಸಂತಸದ ಸಂಗತಿ. ಹೋಬಳಿ, ಗ್ರಾಮ ಮಟ್ಟದಲ್ಲಿ ಕಸಾಪ ಘಟಕಗಳನ್ನು ಸ್ಥಾಪಿಸುತ್ತಿರುವುದು ಕನ್ನಡದ ಬೆಳವಣಿಗೆಯ ಪ್ರತೀಕ ಎಂದು ಹೇಳಿದರು.

ಜೆಡಿಎಸ್ ಮುಖಂಡ ಕಗ್ಗ ರಾಮಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಮೇಲೆ ಹಿಂದಿ ಹೇರಿಕೆ ಒತ್ತಡವಿದೆ. ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದರು.

ಕಸಾಪ ಅಧ್ಯಕ್ಷೆ ಎಸ್.ಎನ್ ಚಂದ್ರಕಲಾ ಮಾತನಾಡಿ, ಇದುವರೆಗೂ ಪುರುಷ ಪಧಾನ ಸಮಾಜ ಎನ್ನುತ್ತಿದ್ದೆವು. ಪುರುಷರ ಹಿಂದೆ ಹಾಗೂ ಜತೆಯಲ್ಲಿರುವುದು ಮಹಿಳೆಯರು. ಆದ್ದರಿಂದ ಆಗಲೂ, ಈಗಲೂ ಮಹಿಳಾ ಪ್ರಧಾನ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net