

ಔರಾದ್: ಮಹಿಳೆಯರು ಸಹ ಪೌಷ್ಟಿಕತೆ ಆಹಾರವನ್ನು ಸೇವಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ ಸ್ವಾಸ್ಥÈ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ.ಕೆ. ಹೇಳಿದರು.
ವಡಗಾಂವ (ದೇ)ದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಪೌಷ್ಟಿಕತೆ ಕಡಿಮೆ ಮಾಡುವ ಉz್ದೆÃಶದಿಂದ ಕೇಂದ್ರ ಸರ್ಕಾರದ ರಾಷ್ಟಿçÃಯ ಪೋಷಣ್ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದ್ದು, ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು, ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ದೊರಕುವ ಸೌಲಭ್ಯಗಳನ್ನು ಬಳಸಿ ಮಕ್ಕಳ ಆರೋಗ್ಯದ ಕಾಳಜಿಗೆ ಮುಂದಾಗಬೇಕು ಎಂದರು.
ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಪಾಟೀಲ್, ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸಿದ್ದರಡ್ಡಿ ಬಿರಾದಾರ್, ಬಿಎಚ್‌ಇಒ ಮಹಾಂತಬಾಯಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ರಾಜಕುಮಾರ ಹೇಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಹೇಡೆ, ಡಾ.ತಸ್ಲೀಮ್, ಪಿಡಿಒ ಸುಭಾಷ ಭುಯ್ಯಾ, ಖಾದರ್ ಖಾನ್, ಆನಂದ, ಅಂಬಿಕಾ, ಶ್ರುತಿ, ಮಹಾಂತಾಬಾಯಿ, ಲಕ್ಷಿö್ಮÃ ದಂಡೆ, ಸುಲೋಚನಾ, ಮನೋರಂಜನಿ, ಶಾರದಾ, ರೇಣುಕಾ, ಸವಿತಾ, ಕನ್ಯಾಕುಮಾರಿ, ರಬೇಕಾ, ಸಚ್ಚಿದಾನಂದ, ಸತೀಶÀ, ದೇವೇಂದ್ರ, ವಡಗಾಂವ ವಲಯದ 58ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ವಲಯ ಮೇಲ್ವಿಚಾರಕಿ ಶೋಭಾ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು. ಗರ್ಭಿಣಿ ಮತ್ತು ಬಾಣಂತಿಯರಿಗೆ ಹಣ್ಣು-ಹಂಪಲು ನೀಡಿ ಸೀಮಂತ ಮತ್ತು ಅನ್ನಪ್ರಾಶನ ಮಾಡಲಾಯಿತು.