

ಚಿಕ್ಕಮಗಳೂರು: ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ಅವರಲ್ಲಿದೆ ಎಂದು ಸಿಎಂಎಸ್‌ಎಸ್‌ಎಸ್ ಸಂಸ್ಥೆಯ ನಿಯೋಜಿತ ನಿರ್ದೇಶಕ ಸ್ವಾಮಿ ಆಲ್ವಿನ್ ಡಿಸೋಜಾ ಶ್ಲಾಘಿಸಿದರು.
ತಾಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜೇಶ್ವರಿ ರಂಗ ಮಂದಿರದಲ್ಲ್ಲಿ ಪ್ರತಿಭಾ ಮಹಾ ಸಂಘ ಸಂತವೇರಿ, ಪ್ರಗತಿ ಮಹಾ ಸಂಘ ಮಲ್ಲೇನಹಳ್ಳಿ ಹಾಗೂ ಸಿಎಂಎಸ್‌ಎಸ್‌ಎಸ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಉತ್ತಮವಾದ ಕುಟುಂಬ ಕಟ್ಟಲು ಮಹಿಳೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಕಾರ್ಯ ಶ್ವಾಘನೀಯವಾದುದ್ದಾಗಿರುತ್ತದೆ ಎಂದು ತಿಳಿಸಿದರು.
ಸಂತವೇರಿ ಸಂತ ರೋಕಿಯವರ ದೇವಾಲಯದ ಧರ್ಮ ಗುರು ಫಾ. ಪ್ರಶಾಂತ್ ಎಸ್.ಜಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕು ಎಂಬ ಉz್ದೆÃಶದಿಂದ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇವುಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಮಹಿಳೆಯರು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ. ವಿಶ್ವದ ಏಕ ಅದ್ಭುತ ಮಹಿಳೆ ತನ್ನ ಕುಟುಂಬ ನಿರ್ವಹಣೆಗೆ ಸರ್ವಸ್ವವನ್ನು ಧಾರೆ ಎರೆಯುವ ಮೂಲಕ ಸಮಾಜದ ಕಣ್ಣಾಗಿದ್ದಾಳೆ ಎಂದು ಬಣ್ಣಿಸಿದರು.
ಬಿಂಡಿಗಾ ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಮಾತನಾಡಿ, ಮಹಿಳೆಯರ ಸಾಧನೆ ಗುರುತಿಸಲು, ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸಲು, ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಬಿಂಡಿಗಾ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಮಾತನಾಡಿ, ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮ ಪಾಲು ಎಂಬAತೆ ಸಮಾಜದಲ್ಲಿ ಮಹಿಳೆಯರಿಗೆ ಸಮಾನಾದ ಹಕ್ಕಿದ್ದು, ಗಂಡು, ಹೆಣ್ಣು ಎಂಬ ಕೀಳರಿಮೆ ಬಿಟ್ಟು ಸಮಾಜದಲ್ಲಿ ಎಲ್ಲರೂ ಸರಿಸಮನಾಗಿ ಬಾಳಬೇಕು ಎಂದು ಹೇಳಿದರು.
ಬಿಂಡಿಗಾ ಗ್ರಾಮ ಪಂಚಾಯಿತಿ ಸದಸ್ಯೆ ಪಲ್ಲವಿ ನಿವೇಶ್ ಮಾತನಾಡಿ, ಸಿಎಂಎಸ್‌ಎಸ್‌ಎಸ್ ಸಂಸ್ಥೆಯು ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಸಹಕಾರಿಯಾಗಿದೆ. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಂಸ್ಥೆ ಬದುಕನ್ನು ಕಟ್ಟಿಕೊಟ್ಟಿದೆ ಎಂದು ತಿಳಿಸಿದರು.
ಸಂಸ್ಥೆಯ ಸಮುದಾಯ ಶಿಕ್ಷಕಿ ಪ್ರಮೀಳಾ ಮಾತನಾಡಿ, ಸಂಸ್ಥೆಯು ಕಳೆದ ೨೦ ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಂಸ್ಥೆಯು ಸಹಕಾರಿಯಾಗಿದೆ ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಪಾಲಕರು ಸಹಕಾರ ನೀಡಬೇಕು. ತಮ್ಮ ಮಕ್ಕಳಿಗೆ ಸಮಾನತೆಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿ ಮಹಾ ಸಂಘದ ಅಧ್ಯಕ್ಷೆ ಸುನೀತ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೀವನಜ್ಯೋತಿ ಸ್ತಿçà ಶಕ್ತಿ ಸೌಹಾರ್ದ ಸಹಕಾರಿ ನಿಯಮಿತ ಲೆಕ್ಕಾಧಿಕಾರಿ ಕೆ.ವಿ.ವಿನಿತ್, ಚಿಕ್ಕಮಗಳೂರು ಮಹಿಳಾ ಠಾಣಾಧಿಕಾರಿ ನಂದಿನಿ ಎಸ್.ಶೆಟ್ಟಿ, ದೇವಿರಮ್ಮ ವಿದ್ಯಾ ಸಂಸ್ಥೆ ಮುಖ್ಯಸ್ಥೆ ಹೇಮಲತಾ, ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಿಮಾ, ಪ್ರತಿಭಾ ಮಹಾ ಸಂಘದ ಅಧ್ಯಕ್ಷೆ ಆಶಾರಾಣಿ, ಕಾಮನದುರ್ಗ ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಉಪಸ್ಥಿತರಿದ್ದರು.