ಮಹಿಳೆಯರಿಂದ ದೀಪಾರಾಧನೆ

Deepothsava
Published on

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ನಗರದ ಹಲವು ದೇಗುಲ, ಮನೆಗಳ ಮುಂಭಾಗ ಸಂಜೆ ದೀಪಾರಾಧನೆ ಮೂಲಕ ಶ್ರೀರಾಮಚಂದ್ರ ಪ್ರಭುವಿಗೆ ಅನೇಕರು ಭಕ್ತಿ ಸಮರ್ಪಿಸಿದರು.

ಬುರುಜನಹಟ್ಟಿಯ ಕೋಟೆ ಆಂಜನೇಯ ಸನ್ನಿಧಿಯಲ್ಲಿ ಸ್ವಾಮಿಗೆ ವಿಶೇಷಾಲಂಕಾರ, ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ನೆರವೇರಿದವು. ಮಹಿಳೆಯರು ವಿಶೇಷ ಬತ್ತಿಯೊಂದಿಗೆ ದೀಪ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net