

ಸೊರಬ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನೇಕ ಮಹಿಳೆಯರು ಕೆಲಸ ನಿರ್ವಹಿಸುತ್ತಾರೆ. ಅದರೆ ಅರಣ್ಯ ಇಲಾಖೆಯಲ್ಲಿ ಮಹಿಳೆಯರು ಪುರುಷ ಸಿಬ್ಬಂದಿಗೆ ಸರಿಸಮಾನವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅಂಗಡಿ ಹೇಳಿದರು. ಗಸ್ತು ಅರಣ್ಯಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಸ್ತೂರಿಬಾಯಿ ಅವರಿಗೆ ತಾಲೂಕಿನ ಬಿಳಾಗಿಯಲ್ಲಿ ಸೊರಬ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸ್ತೂರಿಬಾಯಿ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ ಮೇಲಧಿಕಾರಿಗಳಿಂದ ಹಿಡಿದು ಎಲ್ಲ ನನ್ನ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡುವ ಮೂಲಕ ಪ್ರೇರಣೆ ನೀಡಿದ್ದಾರೆ ಎಂದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಗದೀಶ್, ಉಪವಲಯ ಅರಣ್ಯಾಧಿಕಾರಿ ರಾಮಪ್ಪ, ಹನುಮಂತಪ್ಪ, ಶರಣಪ್ಪ, ಯೋಗರಾಜ್, ಪರಶುರಾಮ್, ಮುತ್ತಣ್ಣ, ಭದ್ರೇಶ್, ಮೌನೇಶ್, ಆನಂದ, ಶ್ರೀಶೈಲ, ರಾಘವೇಂದ್ರ, ಪ್ರವೀಣ್, ಶಿವರಾಜ್, ಕಿರಣ್ ಬೋರಕರ್ ಇತರರಿದ್ದರು.