ಮಹಿಳೆಯರಲ್ಲಿ ಬದಲಾವಣೆ ತಂದ ಶಕ್ತಿ ಯೋಜನೆ

14 ydg 04
Published on

ಶಹಾಪುರ: ಶಕ್ತಿ ಯೋಜನೆ ಮಹಿಳೆಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯP್ಷÀ ಗೌಡಪ್ಪಗೌಡ ಆಲ್ದಾಳ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಕ್ತಿ ಯೋಜನೆ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಈ ಯೋಜನೆ ಮಹಿಳೆಯರನ್ನು ಸಬಲೀಕರಿಸುತ್ತದೆ ಮತ್ತು ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗಿದೆ ಎಂದರು.

ಬಡತನ, ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಯರಿಗೆ ಉಚಿತ ಬಸ್‌ಪಾಸ್ ಬಹಳ ಉಪಯೋಗವಾಗಿದೆ. ಶಕ್ತಿ ಯೋಜನೆಯಿಂದ ಸಾವಿರಾರು ಮಹಿಳೆಯರ ಉದ್ಯೋಗದ ಕನಸು ನನಸಾಗಿದೆ. ಬಹಳಷ್ಟು ಮಹಿಳೆಯರು ಈಗ ಕೆಲಸಕ್ಕೆ ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಸಾರ್ವಜನಿಕ ವಲಯ ಮತ್ತಷ್ಟು ಸುರಕ್ಷಿತವಾಗಲಿದೆ ಎಂದರು.

ಈ ವೇಳೆ ಶಹಾಪುರ ಘಟಕ ವ್ಯವಸ್ಥಾಪಕ ರವಿಶಂಕರ್ ಪತಂಗೆ, ರಾಜ್ಯ ಸರ್ಕಾರಿ ನೌಕರ ಸಂಘದ ಜಿ¯್ಲÁಧ್ಯP್ಷÀ ರಾಯಪ್ಪ ಗೌಡ ಹುಡೆದ್, ಬ್ಲಾಕ್ ಕಾಂಗ್ರೆಸ್ ಅಧ್ಯP್ಷÀ ಶಿವ ಮಹಾಂತು ಸಾಹು ಚಂದಾಪುರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಸಿದ್ದಣ್ಣ ದೇಸಾಯಿ, ಮೌನೇಶ್ ಶೆಟ್ಟಿಕೆರೆ, ತಾಯಮ್ಮ ಅನ್ವಾರ, ಆದಮï ಪಟೇಲï ಮಕ್ತಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net