

ಚಿಕ್ಕೋಡಿ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಿಂದ ಪ್ರತಿದಿನ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಕ್ರಿಯಾಶೀಲತೆ ಹಾಗೂ ಪತ್ರಿಕೆ ಓದುವ ಆಸಕ್ತಿ ಹೆಚ್ಚಿಸಿದೆ. ಓದುಗರ ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಸ್ಪರ್ಧೆಯ ವಿಜೇತೆ ಹಾಗೂ ವಕೀಲೆ ಸುನೀತಾ ಜಕ್ಕನ್ನವರ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಭಾಕರ ಕೋರೆ ನಗರದಲ್ಲಿರುವ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾರಿ ನಿನಗೊಂದು ಸ್ಯಾರಿ ವಿಜೇತರಿಗೆ ಸಾರಿ ವಿತರಣೆ ಹಾಗೂ ಪರಿಸರ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಜಯವಾಣಿ ದಿನಪತ್ರಿಕೆಯಲ್ಲಿ ಮೂಡಿಬರುವ ಧಾರ್ಮಿಕ, ರಾಜಕೀಯ, ಕೃಷಿ ಲೇಖನಗಳು ಹಾಗೂ ನಿಖರವಾದ ಸುದ್ದಿಗಳು ಓದುಗರ ಗಮನ ಸೆಳೆಯುತ್ತವೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಾಕಷ್ಟು ಮಾಹಿತಿ ಒದಗಿಸುತ್ತವೆ ಎಂದು ಪತ್ರಿಕೆ ಕಾರ್ಯ ಶ್ಲಾಘಿಸಿದರು.
ವಿಜೇತರಾದ ಸವಿತಾ ಈರಗಾರ, ಸುನೀತಾ ಜಕ್ಕನ್ನವರ, ಸುರೇಖಾ ಖೋತ, ವೈಶಾಲಿ ಲೋಕುರೆ ಇತರರಿದ್ದರು.
ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿ, ಲೇಖನಗಳು ಯುವಜನಾಂಗಕ್ಕೆ ಸಾಕಷ್ಟು ಸಹಕಾರಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ವಿಪುಲ ಮಾಹಿತಿಯನ್ನು ಪತ್ರಿಕೆ ಒದಗಿಸುತ್ತದೆ. ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಮಹಿಳೆಯರ ಓದುವ ಆಸಕ್ತಿ ಹೆಚ್ಚಿಸಿದೆ.
ದೀಪಾ ಖೋತ ಗೃಹಣಿ