ಮಹಿಳೆಯರ ಸಬಲೀಕರಣದಿಂದ ದೇಶದ ಪ್ರಗತಿ

8BK1
 ಬಸವಕಲ್ಯಾಣದ ಎಸ್‌ಎಸ್‌ಕೆಬಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾಧ್ಯಾಪಕಿ ಉಮಾದೇವಿ ರೆಡ್ಡಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಬಸವರಾಜ ಎವಲೆ, ಪ್ರೊ.ಲಕ್ಷ್ಮೀಬಾಯಿ ಭಂಕೂರ, ಡಾ.ಸುರೇಶ್ ಎಚ್. ಆರ್., ಡಾ.ರಮೇಶ್ ಕೆ.ಬಿ., ಸುಮನ್ ರೆಡ್ಡಿ, ವೈಶಾಲಿ ಎಚ್., ಭಾರತಿ ಮಠ, ಅಶ್ವಿನಿ ಜಲಾದೆ, ಶಿಲ್ಪಾ ಬಿರಾದರ, ವಾಣಿಶ್ರೀ, ಆರುತಿ, ಸೌಮ್ಯ ಜ್ಯೋಶಿ, ಶರಣು ಮಠಪತಿ, ಶಿವಕುಮಾರ ಖೊಲ್ಲೆ ಇದ್ದರು.
Published on

ಬಸವಕಲ್ಯಾಣ: ದೇಶದ ಸಮಗ್ರ ಅಭಿವೃದ್ದಿ ಆಗಬೇಕಾದರೆ ಮಹಿಳೆಯರು ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾದ ಅವಶ್ಯಕತೆ ಇದೆ ಎಂದು ರಾಜೀವ ಗಾಂಧಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಉಮಾದೇವಿ ರೆಡ್ಡಿ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಮಹಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಅದ್ಭುತ ಸಾಧನೆ ಮಾಡುವ ಮೂಲಕ ಹೆಜ್ಜೆ ಗುರುತು ಮೂಡಿಸಿದ್ದಾರೆ. ಸಾಧಕರ ಸಾಧನೆಯನ್ನು ಸ್ಪೂರ್ತಿ ಪಡೆಯಬೇಕು. ಶಿಕ್ಷಣದ ಜತೆಗೆ ಧೈರ್ಯ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ದೇಶದಲ್ಲಿ ವೇದಕಾಲದಿಂದಲೂ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಮಹಿಳೆಯರನ್ನು ಗೌರವಿಸುವ ರಾಷ್ಟ್ರದ ಸಮೃದ್ಧವಾಗಿರುತ್ತದೆ ಎಂದು ಹೇಳಲಾಗುತ್ತದೆ. ಮಹಿಳೆಯರನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.

೧೨ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಸ್ತ್ರೀ ಸಮಾನತೆ ಕಲ್ಪಿಸಲಾಗಿತ್ತು. ಅಕ್ಕ ನಾಗಮ್ಮ, ಅಕ್ಕ ಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಹಾಗೂ ಅನೇಕ ಶರಣೆಯರು ಅಂದು ವಚನಗಳನ್ನು ರಚಿಸಿ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಇಂದು ಹಲವು ಕ್ಷೇತ್ರಗಳಲ್ಲಿ ಅನೇಕ ಮಹಿಳೆಯರು ಸಾಧನೆ ಮಾಡಿ ದೇಶದ, ವಿಶ್ವದ ಗಮನ ಸೆಳೆದ್ದು, ಇವರ ಸಾಧನೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿನಿಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರೊ.ಲಕ್ಷ್ಮೀಬಾಯಿ ಭಂಕೂರ ಅತಿಥಿ ಪರಿಚಯ ಮಾಡಿದರು. ಡಾ.ಸುರೇಶ ಎಚ್.ಆರ್., ಡಾ.ರಮೇಶ್ ಕೆ.ಬಿ., ಸುಮನ ರೆಡ್ಡಿ, ವೈಶಾಲಿ ಎಚ್., ಭಾರತಿ ಮಠ, ಅಶ್ವಿನಿ ಜಲಾದೆ, ಶಿಲ್ಪಾ ಬಿರಾದಾರ, ವಾಣಿಶ್ರೀ, ಆರುತಿ, ಸೌಮ್ಯ ಜ್ಯೋಶಿ, ಶರಣು ಮಠಪತಿ, ಶಿವಕುಮಾರ ಖೊಲ್ಲೆ, ಮಹದೇವ ಡಿ., ಶಿವಶರಣ ಎಂ. ಇದ್ದರು. ಕು.ಲಕ್ಷ್ಮೀ ಸ್ವಾಗತಿಸಿದರು. ಕು. ಪ್ರಿಯದರ್ಶಿನಿ ವಂದಿಸಿದರು. ಕು. ನೇತ್ರ ವಿ. ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net