ಮಹಿಳೆಯರ ಆರೋಗಕ್ಕೆ ಕ್ರೀಡೆ ಪೂರಕ

Oplus_131072
Oplus_131072
Published on

ಹುಮನಾಬಾದ್: ನಿತ್ಯದ ಕೆಲಸದ ಜಂಜಾಟದ ನಡುವೆ ಮನರಂಜನೆ, ಮನೋಲ್ಲಾಸ ದೊರೆಯಬೇಕೆಂಬ ಉದ್ದೇಶದೊಂದಿಗೆ ನರೇಗಾ ಮಹಿಳಾ ಕೂಲಿ ಕಾರ್ಮಿಕರ ಮತ್ತು ಮೇಟಿಗಳ ಕ್ರೀಡಾಕೂಟ ಸ್ಪರ್ಧೆ ಏರ್ಪಡಿಸಿ ಚೈತನ್ಯ ತುಂಬುವ ಕಾರ್ಯ ಅರ್ಥಪೂರ್ಣವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಹೇಳಿದರು.

ಮಾಣಿಕನಗರ ಕ್ರೀಡಾಂಗಳದಲ್ಲಿ ತಾಪಂ ಹಾಗೂ ಮಾಣಿಕನಗರ ಗ್ರಾಪಂ ಸಹಯೋಗದಲ್ಲಿ ತಾಲೂಕು ಮಟ್ಟದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಮತ್ತು ಮೇಟಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶ ರಕ್ಷಣೆ ಮಾಡಲು ಸೈನಿಕರು ಗಡಿಯಲ್ಲಿ ದುಡಿಯುತ್ತಿದ್ದಾರೋ, ಅದೇ ರೀತಿ ಮನೆಯನ್ನು ಬೆಳುಗುವ ಮಹಿಳೆಯರು ದೈಹಿಕ ಸದೃಢರಾಗಲು ಕ್ರೀಡೆ ಅವಶ್ಯಕವಾಗಿದೆ ಎಂದರು.

ಬಿಡುವಿನ ಸಮಯದಲ್ಲಿ ಸರ್ಕಾರಿ ನೌಕರರು ಕೂಡ ವಿವಿಧ ಕ್ರೀಡೆಯನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಮುಂದಿನ ದಿನಗಳಲ್ಲಿ ಜಿಪಂನಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಮಾತನಾಡಿ, ಗ್ರಾಮೀಣ ಮಹಿಳೆಯರು ಇಡೀ ಕುಟುಂಬದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಮುಂತಾದ ಜವಾಬ್ದಾರಿ ಹೊತ್ತು ದಣಿವಿಲ್ಲದೇ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅವರು ಸದೃಢಗೊಳ್ಳಲು ಕ್ರೀಡೆ ಸಹಕಾರವಾಗಿದೆ ಎಂದು ಹೇಳಿದರು.

ಮಾಣಿಕನಗರ ಗ್ರಾಪಂ ಅಧ್ಯಕ್ಷೆ ಪಂಚಶೀಲಾ ಸಿದ್ದಪ್ಪ ಹೆಗ್ಗಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಾಣಿಕ ನೀಬಾಣೆ, ನಂದಗಾಂವ ಗ್ರಾಪಂ ಅಧ್ಯಕ್ಷ ರವಿಕುಮಾರ ರಾಂಪುರೆ, ಧೂಮ್ಮನಸೂರು ಗ್ರಾಪಂ ಅಧ್ಯಕ್ಷ ವೀರಪ್ಪ ಭೋತಾಳೆ, ತಾಪಂ ಎಡಿ ಜಗನ್ನಾಥ, ಪಿಡಿಒಗಳಾದ ರಾಜಶೇಖರ ಬುಳ್ಳಾ, ಹಣಮಂತ ಕಡಕೋಳ, ಮಲ್ಲಿಕಾರ್ಜುನ ಸಾಗರ, ಶಿವರಾಜ ಧುಮ್ಮನಸೂರ, ನಾಗಯ್ಯ ಸ್ವಾಮಿ, ರಾಜು ಬುಳ್ಳಾ, ಮಾದವ ದೇಶಪಾಂಡೆ, ಸಿದ್ದಾರ್ಥ, ಸಂತೋಷ ಮುಗನೂರ, ಮಲ್ಲಪ್ಪ ಸೊನ್ನದ, ವೀರಣ್ಣ ಜಮದಾರ, ರೇಖಾ ಮುಕ್ರಂಬಿ, ಗೀತಾ ಇತರರಿದ್ದರು. ಓಟ, ಕುರ್ಚಿ, ಲಿಂಬು ಸ್ಪೋನ್, ಹಗ್ಗ ಜಗ್ಗಾಟ ಸೇರಿ ವಿವಿಧೆ ಸ್ಪರ್ಧೆ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net