

ಸವದತ್ತಿ: ಸರ್ಕಾರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹ ಲಕ್ಷ್ಮಿ ಯೋಜನೆ ರೂಪಿಸಿದ್ದು, ಮಹಿಳೆಯರ ಪಾಲಿಗೆ ರಕ್ಷಾ ಕವಚವಾಗಿ ನಿಲ್ಲಲಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಮಾಸಿಕ 2,000 ರೂ. ನೀಡುವ ಯೋಜನೆ ಇದಾಗಿದ್ದು, ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಸಿಡಿಪಿಒ ಸುನೀತಾ ಪಾಟೀಲ ಮಾತನಾಡಿ, ಜು. 19 ರಿಂದ ತಾಲೂಕಿನ 111 ಕೇಂದ್ರಗಳಲ್ಲಿ ನೋಂದಣಿ ಪ್ರಾರಂಭವಾಗಿದೆ. ಪ್ರಜಾಪ್ರತಿನಿಧಿಗಳನ್ನು ನೇಮಿಸಿ ಯೋಜನೆ ಯಶಸ್ವಿಗೊಳಿಸಲಾಗಿದೆ ಎಂದರು.
ತಾಪಂ ಇಒ ಯಶವಂತಕುಮಾರ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಪಿಐ ಕರುಣೇಶಗೌಡ ಜೆ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಕಾಶಪ್ಪ ಕಾರ್ಲಕಟ್ಟಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಆಯಟ್ಟಿ, ಪುರಸಭೆ ಸದಸ್ಯರಾದ ಬಾಪು ಚೂರಿಖಾನ್, ಯಲ್ಲಪ್ಪ ರುದ್ರಾಕ್ಷಿ, ಪ್ರವೀಣ ಮುನವಳ್ಳಿ, ದಿಲಾವರ ಸನದಿ ಇತರರಿದ್ದರು.