ಮಹಿಳೆಯರ ತ್ಯಾಗ, ಸಹನೆ ಅನನ್ಯ

h11-IEMS
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನಗರ ಹೊರ ವಲಯದ ತಾರಿಹಾಳದ ಕೈಗಾರಿಕಾ ವಲಯದಲ್ಲಿರುವ ಇನ್​ಸ್ಟಿಟ್ಯೂಟ್ ಆಫ್ ಎಕ್ಸ್​ಲೆನ್ಸ್ ಇನ್ ಮ್ಯಾನೇಜ್​ವೆುಂಟ್ ಸೈನ್ಸ್ (ಐಇಎಂಎಸ್) ಕ್ಯಾಂಪಸ್​ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಅತಿಥಿಯಾಗಿದ್ದ ಎಸ್​ಡಿಎಂ ದಂತ ಕಾಲೇಜ್​ನ ಪ್ರೊ. ಮಹಿಮಾ ದಂಡ್ ಮಾತನಾಡಿ, ಮಹಿಳೆಯರ ತ್ಯಾಗ, ಸಹನೆ ಅನನ್ಯ. ಅವರನ್ನು ಒಂದೇ ದಿನಕ್ಕೆ ಸ್ಮರಿಸಿ ಬಿಟ್ಟುಬಿಡುವುದು ಸರಿಯಲ್ಲ. ಕುಟುಂಬ, ಸಮಾಜಕ್ಕಾಗಿ ತನ್ನ ಜೀವನವನ್ನೆಲ್ಲ ಸವೆಸುತ್ತಾಳೆ ಎಂದರು.

ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಪ್ರೀತಿ ಗೌಡರ ಸ್ವಾಗತಿಸಿದರು. ಪ್ರೊ. ಪ್ರೀತಿ ಬೆಳಗಾಂವಕರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಿನಂತಿ ನಾಯ್ಕ್ ವಂದಿಸಿದರು. ಪ್ರೊ. ಪೂಜಾ ಚರಂತಿಮಠ, ಪ್ರೊ. ಅಕ್ಷತಾ ಬಿಳಗಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net