ಮಹಿಳೆಯರ ಕೈಕಾಲು ಕಟ್ಟಿ ದರೋಡೆ

This is masked man robber with stolen gold.
This is masked man robber with stolen gold.
Published on

ಅಥಣಿ ಪಟ್ಟಣದಲ್ಲಿ ಹಾಡಹಗಲೆ ನಡೆದ ಟನೆ

ಅಥಣಿ: ಹಾಡಹಗಲೇ ಮಹಿಳೆಯರ ಕೈಕಾಲು ಕಟ್ಟಿ ದರೋಡೆ ಮಾಡಿರುವ ಟನೆ ಪಟ್ಟಣದ ತಂಗಡಿ&ಶಿನಾಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಆದರ್ಶ ಬಡಾವಣೆಯಲ್ಲಿ ಶನಿವಾರ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಮಾರುತಿ ಬಜಂತ್ರಿ ಎಂಬುವರ ಮನೆಗೆ ನುಗ್ಗಿದ ಇಬ್ಬರು ದರೋಡೆಕೋರರು ಇಬ್ಬರು ಮಹಿಳೆಯರ ಕೈಕಾಲುಗಳನ್ನು ವೇಲ್​ನಿಂದ ಕಟ್ಟಿ ಚಾಕು ತೋರಿಸಿ "ಚೀರಾಡಿದರೆ ಕೊಲೆ ಮಾಡುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ. ಮನೆಯನ್ನು ಜಾಲಾಡಿ ಪರ್ಸನಲ್ಲಿದ್ದ ಚಿನ್ನದ ಉಂಗುರ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೆಎಸ್​ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ ಹಾಗೂ ಕೆಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ದರೋಡಕೊರರ ಪತ್ತೆ ಶೋಧ ನಡೆಸಿದ್ದಾರೆ. ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net