ಮಹಿಳೆಯರ ಅಭಿವೃದ್ಧಿಗೆ ಸಹಕಾರ ಅಗತ್ಯ

24npk-1
Published on

ನಾಪೋಕ್ಲು: ಯಾವುದೇ ರಂಗದಲ್ಲಾದರೂ ಮಹಿಳೆಯರು ಮುಂದೆ ಬರಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.


ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾವೇರಿ ಮಹಿಳಾ ಸಮಾಜದ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಸಾಮಾಜಿಕ ಕಳಕಳಿಯಿಂದ ದುಡಿಯುವ ಮಹಿಳೆಯರಿಗೆ ಹಲವಾರು ಅಡೆತಡೆಗಳು ಇರುತ್ತವೆ. ಕುಟುಂಬ, ನೆರೆಹೊರೆಯವರ ಬೆಂಬಲದೊಂದಿಗೆ ಮಹಿಳೆಯರು ಎದೆಗುಂದದೆ ಧೈರ್ಯದಿಂದ ಜನಸೇವೆ ಮಾಡಬೇಕಿದೆ. ಆತ್ಮಾಭಿಮಾನ ಇದ್ದರೆ ಸಾಮಾಜಿಕವಾಗಿ ಬೆಳೆಯಲು ಸಾಧ್ಯ ಎಂದರು.


ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಕಷ್ಟು ಅವಕಾಶಗಳಿವೆ. ಹಳ್ಳಿಯ ಮಹಿಳೆಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದರು.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಕುಶಾಲಪ್ಪ, ನಿವೃತ್ತ ಶುಶ್ರೂಷಕಿ ಅಪ್ಪಚೆಟ್ಟೋಳಂಡ ರಾಧಾ ದೇವಯ್ಯ, ಮುಖಂಡ ನೆರವಂಡ ಉಮೇಶ್ ಮಾತನಾಡಿದರು.
ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಮುಖಂಡ ನೆರವಂಡ ಉಮೇಶ್, ಸ್ಥಳದಾನಿ ಅಪ್ಪಚೆಟ್ಟೋಳಂಡ ಶ್ಯಾಂ ಕಾಳಯ್ಯ, ಅನಿತಾ ಕಾಳಯ್ಯ, ಕಟ್ಟಡ ನಿರ್ಮಾಪಕ ಅಬ್ದುಲ್ಲಾ ಅವರನ್ನು ಸನ್ಮಾನಿಸಲಾಯಿತು.
ಕಾವೇರಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಅಪ್ಪಚೆಟ್ಟೋಳಂಡ ಕಾವೇರಿ ಮುತ್ತಪ್ಪ, ಕಾರ್ಯದರ್ಶಿ ನುಚ್ಚುಮಣಿಯಂಡ ನಳಿನಿ ಮಾದಪ್ಪ, ಖಜಾಂಚಿ ಬೈರುಡ ಪ್ರೇಮಾ ಜಗದೀಶ್, ಸದಸ್ಯರಾದ ಅಪ್ಪಚೆಟ್ಟೋಳಂಡ ಶಾಂತಿ ಭೀಮಯ್ಯ, ಚಂಗೇಟಿರ ಶಾಂತಿ ಅಪ್ಪಯ್ಯ, ನುಚ್ಚುಮಣಿಯಂಡ ಶೈಲಾ ಮಾದಪ್ಪ, ನೆರವಂಡ ಮೀರ ಮಂದಣ್ಣ, ನೆರವಂಡ ರಾಣಿ ಭೀಮಯ್ಯ, ಮಾದೆಯಂಡ ಅಮಿತಾ ಚರ್ಮಣ್ಣ, ಬೊಳ್ಳುಮಾನಿ ವಿಮಲಾಕ್ಷಿ ಅಪ್ಪಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net