

ಸೊರಬ: ಮಹಿಳೆ ಕೇವಲ ವ್ಯಕ್ತಿಯಲ್ಲ. ಒಂದು ಅದ್ಭುತ ಶಕ್ತಿ ಮಹಿಳೆಯರನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ತಿಳಿಸಿದರು.
ಬುಧವಾರ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಭಾಗ್ಯವತಿ ಅವರನ್ನು ಸನ್ಮಾನಿಸಿ ಮಾತನಾಡಿ, ಮಹಿಳೆಯರು ಇಂದು ಸಾಮಾಜಿಕ, ಧಾರ್ಮಿಕ, ವೈಜ್ಞಾನಿಕ, ರಾಜಕೀಯ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮನಾಗಿ ದುಡಿದು ಸಾಧನೆ ಮಾಡುತ್ತಿದ್ದಾರೆ. ಸಾಧಕಿಯರು ನಮ್ಮೊಳಗೆ ಇರುತ್ತಾರೆ ಅವರನ್ನು ಗುರುತಿಸಿ, ಬೆಳೆಸಿ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ ಎಲ್ಲಿ ಮಹಿಳೆಯರನ್ನು, ಸೀಯರನ್ನು, ಗೌರವದಿಂದ ಪೂಜ್ಯ ಭಾವನೆಯಿಂದ ಕಾಣುತ್ತಾರೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸರ್ಕಲ್ ಇನ್ಸ್‍ಪೆಕ್ಟರ್ ಶ್ರೀಮತಿ ಭಾಗ್ಯವತಿ ಬಂತಿ ಅವರನ್ನು ಸನ್ಮಾನಿಸಿದ್ದು ಸಮಾಜದ ಎಲ್ಲ ಮಹಿಳೆಯರಿಗೆ ಸನ್ಮಾನಿಸಿದ ಹಾಗೆ ಆಗಿದೆ ಎಂದರು.
ಪಿಎಸ್‍ಐ ನಾಗರಾಜ್, ಯುವ ಬ್ರಿಗೇಡ್‍ನ ಸಂಚಾಲಕ ಮಹೇಶ್ ಖಾರ್ವಿ, ಅಕ್ಕನ ಬಳಗದ ಅಧ್ಯಕ್ಷ ರೇಣುಕಮ್ಮ ಗೌಳಿ, ಸುರಭಿ ಮಹಿಳಾ ಯಕ್ಷ ಬಳಗದ ಶ್ರೀಮತಿ ಸುಬ್ರಮಣ್ಯ, ಶಿಲ್ಪಾ ಸತೀಶ್, ಅಕ್ಕನ ಬಳಗದ ಪೂರ್ಣಿಮಾ ಶಿವಯೋಗಿ, ರೇಖಾ ಸಂಗಣ್ಣ, ಗಣಪತಪ್ಪ, ಪೆÇಲೀಸ್ ಸಿಬ್ಬಂದಿ ಉಷಾ, ಸುಚಿತ್ರಾ, ರಾಘು ಉಪಸ್ಥಿತರಿದ್ದರು.