ಮಹಿಳೆಯ ಹೊಟ್ಟೆಯಲ್ಲಿದ್ದ 5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Docter
ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ ಶಸ್ತ್ರ ಚಿಕಿತ್ಸೆ ಬಳಿಕ 5 ಕೆಜಿ ಗಡ್ಡೆಯನ್ನ ಹೊರತೆಗೆದಿರುವುದು.
Published on

ದೊಡ್ಡಬಳ್ಳಾಪುರ: ಮಹಿಳೆಯ ಹೊಟ್ಟೆಯಲ್ಲಿದ್ದ 5 ಕೆಜಿ ಗಡ್ಡೆ ಹೊರತೆಗೆದ ಸಾರ್ವಜನಿಕ ಆಸ್ಪತ್ರೆ ವೈದ್ಯರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ನಗರದ 45 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ ಹೊಟ್ಟೆ ನೋವಿನಿಂದ ನರಳುತ್ತಿದ್ದರು, ಸಾರ್ವಜನಿಕ ಆಸ್ಪತ್ರೆಗೆ ಬಂದ ಆಕೆಯನ್ನು ಡಾ.ಅರ್ಚನಾ ಪರೀಸಿದಾಗ ಹೊಟ್ಟೆಯಲ್ಲಿ 5 ಕೆಜಿ ಗಡ್ಡೆ ಪತ್ತೆಯಾಗಿತ್ತು. ಸತತ ಎರಡು ಗಂಟೆ ಶಸ್ತ$ಚಿಕಿತ್ಸೆ ನಡೆಸಿದ ಡಾ.ಅರ್ಚನಾ ನೇತೃತ್ವದ ತಂಡವು, ಗಡ್ಡೆಯನ್ನ ಹೊರಗೆ ತೆಗೆದಿದೆ, ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯ ನಿಗಾ ಟಕದಲ್ಲಿ ದಾಖಲು ಮಾಡಲಾಗಿದೆ, ಹೆಚ್ಚಿನ ಪರೀಕ್ಷೆಗಾಗಿ ಗಡ್ಡೆಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.  ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡಕ್ಕೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್​, ಟಿಎಚ್​ಒ ಡಾ.ಶಾರದಾ ನಾಗನಾಥ್​, ಡಾ.ಮಂಜುನಾಥ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net