ಮದ್ದೂರು: ಮದ್ದೂರು ಪಣ್ಣೆದೊಡ್ಡಿ ಗ್ರಾಮಕ್ಕೆ ಮಂಗಳವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಯಾರೋ ಅಪರಿಚಿತರು ಅಪಹರಿಸಿದ್ದಾರೆ.
ಪಣ್ಣೆದೊಡ್ಡಿ ಗ್ರಾಮದ ಎ.ಜಯರತ್ನ ಮಾಂಗಲ್ಯ ಸರ ಕಳೆದುಕೊಂಡವರು. ಮದ್ದೂರಿಗೆ ಬಂದು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ನಂತರ ವಾಪಸ್ ಪಣ್ಣೆದೊಡ್ಡಿಗೆ ಬಸ್‌ನಲ್ಲಿ ಹೋಗುವಾಗ ಬೆಸಗರಹಳ್ಳಿ ಬಳಿ ಬಸ್ ರಶ್ ಇದ್ದ ಸಂದರ್ಭದಲ್ಲಿ 40 ಗ್ರಾಂ ಮಾಂಗಲ್ಯ ಸರವನ್ನು ಬಸ್‌ನಲ್ಲಿ ಯಾರೋ ಅಪಹರಿಸಿದ್ದಾರೆ. ಪಣ್ಣೆದೊಡ್ಡಿ ಗ್ರಾಮದಲ್ಲಿ ಬಸ್‌ನಿಂದ ಇಳಿದಾಗ ಜಯರತ್ನ ಅವರಿಗೆ ಮಾಂಗಲ್ಯ ಸರ ಕಳ್ಳತನವಾಗಿರುವುದು ಗೊತ್ತಾಗಿದೆ.
ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಸಗರಹಳ್ಳಿ ವ್ಯಾಪ್ತಿಯಲ್ಲಿ ಸರಗಳ್ಳತನವಾಗುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿದ್ದ ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಬೆಸಗರಹಳ್ಳಿಗೆ ಠಾಣೆಗೆ ಬಂದು ಪರಿಶೀಲಿಸಿ ಹೋದ ಬೆನ್ನಲ್ಲೇ ಮತ್ತೆ ಸರಗಳ್ಳತನ ನಡೆದಿದೆ.