ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಈಡಿಗರಪಾಳ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ಖದೀಮರು ಮಹಿಳೆಯ ತಲೆಗೆ ಹೊಡೆದು ಮಾಂಗಲ್ಯ ಸರ ಕಳುವು ಮಾಡಿದ್ದಾರೆ. ಮಾರೇಗೌಡ ಅವರ ಪತ್ನಿ ರುಕ್ಮಿಣಿ(26) ಸರಕಳೆದುಕೊಂಡವರು. ಮುಂಜಾನೆ ಪಾತ್ರೆ ತೊಳೆದು ಮನೆಯೊಳಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ತಲೆಗೆ ರಾಡ್ನಿಂದ ಹೊಡೆದು ಮಾಂಗಲ್ಯ ಸರ ಕಳವು ಮಾಡಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡ ಮಹಿಳೆ ಚಿರಾಡುತ್ತ ಕಳಗೆ ಬಿದ್ದಿದ್ದು, ತಕ್ಷಣ ಪಕ್ಕದ ಮನೆಯವರು ಗಮನಿಸಿ ಮಾರೇಗೌಡ ಅವರ ಗಮನಕ್ಕೆ ತಂದು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ನವೀನ್ಗೌಡ, ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಘಟನೆಯ ಸ್ಥಳಕ್ಕೆ ಎ.ಎಸ್.ಪಿ ಅಬ್ದುಲ್ ಖಾದರ್ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರು: ಮನೆಮುಂದೆ ನಿಲ್ಲಿಸಿದ್ದ ಬಸ್ ಕಳ್ಳತನ ಮಾಡಿರುವ ಟನೆ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ತೋವಿನಕೆರೆ ಗ್ರಾಮದ ಸೈಯದ್ಗೌಸ್ ಎಂಬುವವರಿಗೆ ಸೇರಿದ್ದ ಬಸ್ ಕಳ್ಳತನವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಮೆಂರ್ಟ್ಸ್ ಕೆಲಸಕ್ಕೆ ತೆರಳುವ ಕೆಲಸಗಾರರನ್ನ ಕರೆದೊಯ್ಯಲು ಸಾಲ ಮಾಡಿ ಬಸ್ ತಂದಿದ್ದ ಮಾಲೀಕ ಸೈಯದ್ಗೌಡ್. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.