ಮಹಿಳೆಯ ಕೊರಳಿನ ಸರ ಕದ್ದ ಸರಗಳ್ಳರು

ಮಹಿಳೆಯ ಕೊರಳಿನ ಸರ ಕದ್ದ ಸರಗಳ್ಳರು
Published on

ಹಾಸನ : ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 28 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಶುಕ್ರವಾರ ಮಧ್ಯಾಹ್ನ ಸರಗಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಹೇಮಾವತಿ ನಗರ ನಿವಾಸಿ ರೇಣುಕಾ ಎಂಬುವರ ಕೊರಳಿಂದ ಚಿನ್ನಾಭರಣ ಕದಿಯಲಾಗಿದೆ.. ಇವರು ಎಂಸಿಇ ಕಾಲೇಜು ಎದುರಿನ ವಿದ್ಯುತ್ ನಗರದ 3ನೇ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ತೀರಾ ಹತ್ತಿರಕ್ಕೆ ಬಂದು ತಾಳಿ ಹಾಗು 2 ಗುಂಡುಗಳಿರುವ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಾಂಗಲ್ಯ ಸರ ಮೌಲ್ಯ 1.68 ಲಕ್ಷ ರೂ. ಆಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net