ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಳವು

ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಳವು
Published on

ಹಾಸನ: ನಗರದ ಕಟ್ಟಿನಕೆರೆ ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಬಂಧ ಸಾಮಾಗ್ರಿಗಳನ್ನು ಖರೀದಿಸುವಾಗ ಮಹಿಳೆಯ ಕತ್ತಿನಲ್ಲಿದ್ದ 40 ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಳವು ಮಾಡಿದ್ದಾರೆ.
ಜಯನಗರ 2 ನೇ ಹಂತದ ನಿವಾಸಿ ಹೊನ್ನೇಶ್ವರಿ ಅವರು ಬುಧವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ನಗರದ ಕಟ್ಟಿನಕೆರೆ ಮಾರ್ಕೆಟ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಬಂಧ ಸಾಮಾಗ್ರಿಗಳನ್ನು ಖರೀದಿಸಲು ಬಂದಿದ್ದರು. ಈ ವೇಳೆ ಯಾರೋ ಕಳ್ಳರು ಮಹಿಳೆಯ ಗಮನಕ್ಕೆ ಬಾರದ ಹಾಗೆ ಅವರ ಕುತ್ತಿಗೆಯಲ್ಲಿದ್ದ 1.30 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿದ್ದಾರೆ.
ಘಟನೆ ಸಂಬಂಧ ಹೊನ್ನೇಶ್ವರಿ ಅವರು ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net