ಮಹಿಳೆಗೆ 1.25 ಲಕ್ಷ ರೂ. ವಂಚನೆ

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಹಾಸನ: ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅಪಚರಿತ ವ್ಯಕ್ತಿಯೊಬ್ಬ 1.25 ಲಕ್ಷ ರೂ. ಹಣ ವಂಚನೆ ಮಾಡಿದ್ದಾನೆ.
ಬೇಲೂರು ತಾಲೂಕಿನ ಇಂಟಿತೊಳಲು ಗ್ರಾಮದ ಯುವತಿ ಪೂಜಾ ಹಾಸನದ ಸಂತೆಪೇಟೆಯಲ್ಲಿರುವ ಯುನಿಯನ್ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಬುಧವಾರ ಮಧ್ಯಾಹ್ನ ಯುವತಿಯ ತಾಯಿ ಕಮಲಾ ಅವರು ಪೂಜಾ ಅವರ ಎಟಿಎಂ ಕಾರ್ಡ್‌ನಿಂದ ಹಣ ಡ್ರಾ ಮಾಡಲು ನಗರದ ಎನ್.ಆರ್.ಸರ್ಕಲ್ ಬಳಿಯಿರುವ ಯುನಿಯನ್ ಬ್ಯಾಂಕ್ ಎಟಿಎಂಗೆ ಬಂದಿದ್ದಾರೆ. ಹಣ ಡ್ರಾ ಮಾಡಲು ಹೋದಾಗ ಅಲ್ಲಿದ್ದ ಯಾರೋ ಅಪರಿಚಿತ ವ್ಯಕ್ತಿ ಸಹಾಯ ಮಾಡುವುದಾಗಿ ಹೇಳಿ ಕಮಲಾ ಅವರಿಂದ ಎಟಿಎಂ ಕಾರ್ಡ್ ಮತ್ತು ಪಿನ್ ಪಡೆದು ನಂತರ ಯಾವುದೋ ಬೇರೆ ಎಟಿಎಂ ಕಾರ್ಡ್ ಕೊಟ್ಟು ಹೋಗಿದ್ದಾನೆ. ಬಳಿಕ ಆ ಎಟಿಎಂ ಕಾರ್ಡ್‌ನಿಂದ ಒಟ್ಟು 1,25,000 ಸಾವಿರ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ. ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಪೂಜಾ ಅವರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net