ಮಹಿಳೆ ಸಾವು

Published on

ಬಳ್ಳಾರಿ : ಶೆಡ್ ಚಾವಣಿ ಕುಸಿದು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ಬಂಡಿಹಟ್ಟಿ ನಿವಾಸಿ ಲಕ್ಷ್ಮಿ ಮೃತ. ಇತ್ತೀಚೆಗೆ ನಗರದ ಹೊರವಲಯ ಹಳೇ ಬೈಪಾಸ್ ರಸ್ತೆ ಬಳಿಯ ಮೈದಾನದಲ್ಲಿ ಮೊಹರಂ ಕೊನೆಯ ದಿನ ಪೀರಲ ದೇವರ ಸವಾರಿ ನೋಡಲು ಜನರು ಶೆಡ್ ಚಾವಣಿ ಮೇಲೆ ನೂರಾರು ಜನರು ಕುಳಿತಿದ್ದರು. ಏಕಏಕಿ ಶೆಡ್ ಚಾವಣಿ ಕುಸಿದು ಒಬ್ಬರ ಮೇಲೋಬ್ಬರು ಬಿದ್ದ ಕಾರಣ ಇಬ್ಬರು ಮಹಿಳೆಯರಿಗೆ ಗಾಯವಾಗಿತ್ತು. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net