ಮಹಿಳೆ ಸರ ಕಸಿದು ಪರಾರಿ

Chain Snatch
Published on

ಮೈಸೂರು: ನಗರದಲ್ಲಿ ಸರಗಳ್ಳತನ ಮತ್ತೆ ಸದ್ದು ಮಾಡಿದೆ. ಸ್ಕೂಟರ್‌ನಲ್ಲಿ ಬಂದ ಖದೀಮರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ 58 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಹೆಬ್ಬಾಳ ಠಾಣಾ ವ್ಯಾಪ್ತಿ ಬಸವನಗುಡಿ ನಿವಾಸಿ ನೇತ್ರಾವತಿ (42) ಸರವನ್ನು ಕಳೆದುಕೊಂಡವರು. ಇವರು ತಮ್ಮ ಅತ್ತಿಗೆಯೊಂದಿಗೆ ಸಂಜೆ 7.15ರಲ್ಲಿ ಹೆಬ್ಬಾಳದ ಎಸ್‌ಬಿಐ ರಸ್ತೆಯಲ್ಲಿ ತಮ್ಮ ಮನೆಗೆ ಹೋಗುತ್ತಿದ್ದರು.

ಈ ವೇಳೆ ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ಇಬ್ಬರಲ್ಲಿ ಹಿಂಬದಿಯ ಸವಾರ ಸರ ಕಸಿದುಕೊಂಡು ಹೋಗಿದ್ದಾರೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net