ಮಹಿಳೆ ರಕ್ಷಿಸಿದ್ದ ನೌಕರನಿಗೆ ಸನ್ಮಾನ

26-05--krs1 (2)
Published on

ಕೆ.ಆರ್.ಸಾಗರ: ಇತ್ತೀಚೆಗೆ ಕೃಷ್ಣರಾಜಸಾಗರದ ದೋಣಿ ವಿಹಾರ ಕೇಂದ್ರದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಬಿದ್ದಿದ್ದ ಚಾಮರಾಜನಗರ ಮೂಲದ ಮಹಿಳೆಯನ್ನು ರಕ್ಷಿಸಿದ್ದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ನೌಕರ ಮಾದಪ್ಪ ಅವರನ್ನು ಕೆ.ಆರ್.ಸಾಗರ ಕೆಎಸ್‌ಐಎಸ್‌ಎಫ್ ಘಟಕದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಘಟಕದ ಉಸ್ತುವಾರಿ ಜಗದೀಶ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಕೆಎಸ್‌ಎಸ್‌ಎಫ್ ಸಿಬ್ಬಂದಿ ಮಾದಪ್ಪ ಉತ್ತಮ ಕೆಲಸ ಮಾಡಿದ್ದು, ಇವರ ಈ ಕಾರ್ಯ ಇತರ ಸಿಬ್ಬಂದಿಗೂ ಪ್ರೋತ್ಸಾಹದಾಯಕವಾಗಿದೆ. ಇತರರು ತಮ್ಮ ಕರ್ತವ್ಯದ ಜತೆಗೆ ಜನಸ್ನೇಹಿ ಕೆಲಸಗಳನ್ನು ಮಾಡಬೇಕು, ನಮ್ಮ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಇತರರಿಗೆ ಮಾದರಿಯಾಗಿರ ಬೇಕು ಎಂದು ಕಿವಿಮಾತು ಹೇಳಿದರು.

ಘಟಕದ ಎಎಸೈಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net