

ಮೈಸೂರು
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗಾರ್ಮೆಂಟ್ಸ್‌ನ ಕಾರ್ಮಿಕ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ.
ಹೂಟಗಳ್ಳಿಯಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ, ವಿನಾಯಕನಗರದ ಭಾಗ್ಯಾ ಎಂಬುವರು 2.2 ಲಕ್ಷ ರೂ. ಮೊತ್ತದ 35 ಗ್ರಾಂ ತೂಕದ ಸರ ಕಳೆದುಕೊಂಡಿದ್ದಾರೆ.
ಇವರು ಮಾ.15ರಂದು ಸಂಜೆ ಕೆಲಸ ಮುಗಿಸಿ ಲಿಂಗದೇವರಕೊಪ್ಪಲು ಬಳಿ ಇರುವ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಮೈಸೂರು ನಗರ ಬಸ್ ನಿಲ್ದಾಣಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು.
ಈ ವೇಳೆ, ಖದೀಮ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ. ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.