ಮಹಿಳೆ ಜೀವ ತೆಗೆದವನಿಗೆ ಒಂದು ವರ್ಷ ಜೈಲು

Published on

ಕೊಳ್ಳೇಗಾಲ: ರಸ್ತೆ ಅಪಘಾತದಲ್ಲಿ ಮಹಿಳೆಯ ಜೀವ ತೆಗೆದವನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಜೆಎಂ.ಎಫ್‌ಸಿ ನ್ಯಾಯಾಲಯ ಜೂ.4 ರಂದು ಆದೇಶ ನೀಡಿದೆ.

ಪಟ್ಟಣದ ಬಸ್ ನಿಲ್ದಾಣ ಸಮೀಪದಲ್ಲಿರುವ ಬಸವೇಶ್ವರ ರೈಸ್‌ಮಿಲ್ ರಸ್ತೆಯಲ್ಲಿ ಉಮೇಶ್ 2023 ರ ಜು.23 ರಂದು ಪ್ಯಾಸೆಂಜರ್ ಆಟೋವನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರು. ಅದಲ್ಲದೆ ವೇಗವಾಗಿ ಸಂಚರಿಸಿ ಹರಳೆ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಂದ್ರಮ್ಮ ಎಂಬ ಮಹಿಳೆಗೆ ಡಿಕ್ಕಿಯೊಡೆದಿದ್ದರು.

ಈ ಸಂದರ್ಭ ಸುಂದ್ರಮ್ಮ ಅವರು ತ್ರೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೃತ್ತ ನಿರೀಕ್ಷಕ ಎನ್.ಜಿ.ಕೃಷ್ಣಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಜೆ.ರವಿಸೆಂತಿಲ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net