ಮಹಿಳೆ ಎಂದೂ ಅವಲಂಬಿತಳಲ್ಲ

Screenshot_20230331_143630
Published on

ಹೊಳೆನರಸೀಪುರ: ಮಹಿಳೆ ಸಮಾಜದಲ್ಲಿ ವಿಶೇಷವಾಗಿ ಸಾಧಿಸಬೇಕಾದರೆ ತಾನು ಕಲಿತ ವಿದ್ಯೆಯನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕು. ಎಲ್ಲಿಯೂ ಸೋಲದಂತೆ ಹೆಜ್ಜೆ ಇಡಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಗೀತಾ ಅಭಿಪ್ರಾಯಪಟ್ಟರು.


ತಾಲೂಕಿನ ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ಎಂದೂ ಅವಲಂಬಿತಳಲ್ಲ. ಈ ಹಿಂದೆ ಮಹಿಳೆ ಪುರುಷ ಅವಲಂಬಿ ಎಂಬ ಮಾತು ಇತ್ತು. ಆದರೆ, ಇಂದು ಈ ಮಾತು ತದ್ವಿರುದ್ಧವಾಗಿದ್ದು ಪುರುಷರೇ ಮಹಿಳೆಯರನ್ನು ಅವಲಂಬಿತರಾಗಿರುವ ಕಾಲ ಬಂದಿದೆ ಎಂದು ಹೇಳಿದರು.


ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ವಿದ್ಯಾ ಮಾತನಾಡಿ, ಪ್ರತಿಯೊಬ್ಬ ಮಹಿಳೆಯೂ ಸಾಧಿಕಿಯೇ ಆಗಿರುತ್ತಾಳೆ. ಎಲ್ಲ ಪುರುಷರು ಲಿಂಗ ಸಮಾನತೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.


ಪ್ರಾಂಶುಪಾಲ ಜಿ.ಡಿ.ನಾರಾಯಣ್ ಮಾತನಾಡಿದರು. ಪ್ರೊ.ಗೀತಾ ಅವರನ್ನು ಗೌರವಿಸಲಾಯಿತು. ಸೂಪರಿಂಟೆಂಡೆಂಟ್ ವಿಶಾಲಾಕ್ಷಿ, ವಿನುತಾ ಹಾಗೂ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net