ಮಹಿಳೆ ಆರೋಗ್ಯದತ್ತ ಗಮನವಹಿಸಲಿ

30 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರೋಗ್ಯವಂತ ಮಹಿಳೆಯರಿಂದಲೇ ದೇಶದ ಪ್ರಗತಿ ಎಂದು ವೈದ್ಯೆ ಡಾ. ಗೌರಿ ಪಾಟೀಲ (ಬೆಲ್ಲದ) ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಸ್ವಾಸ್ಥ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳೆಯ ದೈಹಿಕ ಸ್ವಾಸ್ಥ್ಯ, ಸೌಂದರ್ಯ ವರ್ಧನೆ ಕುರಿತು ಮಾತನಾಡಿದರು.
ಭಾರತದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ ಪುರುಷರಿಗಿಂತ ಹೆಚ್ಚಾಗಿದ್ದರೂ ಮಹಿಳೆಯರ ದೈಹಿಕ ಆರೋಗ್ಯ ಕುಟುಂಬದಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ. ಆಧುನಿಕ ಯುಗದಲ್ಲಿ ಮಹಿಳೆಯರು ಮನೆ ಒಳಗೂ-ಹೊರಗೂ ಎಡಬಿಡದೆ ಕೆಲಸ ಮಾಡುತ್ತಿರುವುದರಿಂದ ಅವರ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಿಲ್ಲ. ಈ ಅಂಶದ ಕಡೆ ಮಹಿಳೆ ಗಮನಹರಿಸಬೇಕಾಗಿದೆ ಎಂದರು.
ಮಹಿಳೆಯ ಮಾನಸಿಕ ಸ್ವಾಸ್ಥ್ಯ ಕುರಿತು ಸುಪ್ರಿಯಾ ಏಕಬೋಟೆ ಮಾತನಾಡಿ, ಮಹಿಳೆ ಅನೇಕ ವಿಧಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದರಿಂದ ಆಕೆಯ ಮಾನಸಿಕ ಆರೋಗ್ಯ ಹದಗೆಟ್ಟು, ದೈಹಿಕ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಮಹಿಳೆ ಸಂಯಮ ಕಳೆದುಕೊಳ್ಳದೆ ಮಾನಸಿಕ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.
ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಂತರ ಸಂವಾದ ನಡೆಯಿತು. ಡಾ. ವಿ. ಶಾರದಾ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಡಾ. ಧನವಂತ ಹಾಜವಗೋಳ, ಶಾರದಾ ಶಿವಣ್ಣ ಬೆಲ್ಲದ, ಕೆ.ಜಿ. ದೇವರಮನಿ, ಮಹಾಂತೇಶ ನರೇಗಲ್, ಕೋಟಿಗೌಡರ, ಪಾರ್ವತಿ ಹಾಲಭಾವಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಪ್ರಭಾ ನೀರಲಗಿ, ಇತರರು ಇದ್ದರು.
ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಹಡಗಲಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net