ಮಹಿಳಾ ಸಹಕಾರ ಬ್ಯಾಂಕ್ ಗ್ರಾಹಕರಿಗೆ ಶೇ. ೧೨ರಷ್ಟು ಡಿವಿಡೆಂಟ್ ಘೋಷಣೆ

23 ckm 7
ಚಿಕ್ಕಮಗಳೂರಿನ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ ೨೬ನೇ ವಾರ್ಷಿಕ ಮಹಾಸಭೆಯನ್ನು ಬ್ಯಾಂಕಿನ ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಬ್ಯಾಂಕಿAಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಗ್ರಾಹಕರಿಗೆ ನಿರಾಶೆಯಾಗದಂತೆ ಬ್ಯಾಂಕಿನ ಲಾಭಾಂಶದಲ್ಲಿ ಶೆ. ೧೨ರಷ್ಟು ಡಿವಿಡೆಂಟ್ ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷೆ ಬಿ.ಸಿ.ಗೀತಾ ಘೋಷಣೆ ಮಾಡಿದರು.

ನಗರದ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೨೬ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಬ್ಯಾಂಕಿನ ಕ್ಯೂಆರ್ ಕೋಡ್ ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದೇ ವಂಚನೆ ಇಲ್ಲದೆ ಬ್ಯಾಂಕಿನ ಪ್ರಗತಿ ಸಾಗಬೇಕಾದರೆ ಆಡಳಿತ ಮಂಡಳಿಯ ಎಲ್ಲ ಸದಸ್ಯರ ಸಹಕಾರ ಅಗತ್ಯ. ಕನ್ನಡದಲ್ಲಿ ವ್ಯವಹಾರ ಮಾಡುವುದರ ಜೊತೆಗೆ ತ್ವರಿತ ಸೇವೆ ನೀಡುವಲ್ಲಿ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಬ್ಯಾAಕಿನ ವಹಿವಾಟು ಅತ್ಯಂತ ತೃಪ್ತಿಕರವಾಗಿದೆ. ವಿಶೇಷವಾಗಿ ಇಂದು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಇದರಿಂದ ಪ್ರತಿಯೊಬ್ಬ ಗ್ರಾಹಕರಿಗೂ ವ್ಯವಹಾರ ತಲುಪಬೇಕೆಂಬ ಉz್ದೆÃಶ ಹೊಂದಲಾಗಿದೆ ಎಂದು ಹೇಳಿದರು.

ಬ್ಯಾಂಕ್ ಈ ಸಾಲಿನಲ್ಲಿ ೧,೭೭೩ ಕೋಟಿ ರೂ. ವ್ಯವಹಾರ ಮಾಡಿದ್ದು, ೩೧೩ ಕೋಟಿ ರೂ. ಠೇವಣಿ ಹೊಂದಲಾಗಿದೆ, ೨೦೮ ಕೋಟಿ ರೂ. ಹೊರಬಾಕಿ ಸಾಲ ಇದೆ. ಬ್ಯಾಂಕಿನಲ್ಲಿ ೭,೧೫೭ ಸದಸ್ಯರಿದ್ದು ೨೨,೯೧೪ ಗ್ರಾಹಕರನ್ನು ಹೊಂದಿz್ದÉÃವೆ. ಒಟ್ಟು ಬ್ಯಾಂಕ್ ೫.೫೭ ಕೋಟಿ ರೂ. ಲಾಭ ಗಳಿಸಿದೆ. ತೆರಿಗೆ ಪಾವತಿ ನಂತರ ರೂ ೩.೩೭ ಕೋಟಿ ನಿವ್ವಳ ಲಾಭಗಳಿಸಿದೆ. ಈ ಸಾಲಿನಲ್ಲಿ ಶೇ. ೧೨ರಷ್ಟು ಡಿವಿಡೆಂಟನ್ನು ಷೇರುದಾರರಿಗೆ ನೀಡಲಾಗುವುದು ಎಂದರು.

ನಗರದ ಎಲ್ಲ ಸಹಕಾರಿ ಬ್ಯಾಂಕ್‌ಗಳಿಗಿAತ ನಮ್ಮ ಬ್ಯಾಂಕ್ ವಿಭಿನ್ನವಾಗಿ ಸೇವೆ ಸಲ್ಲಿಸುತ್ತಿದ್ದು, ಎಲ್ಲ ರೀತಿಯ ಡಿಜಿಟಲ್ ಬ್ಯಾಂಕಿAಗ್, ಎಟಿಎಂ, ಪಿಓಎಸ್, ಮೊಬೈಲ್ ಬ್ಯಾಂಕಿAಗ್ ಸೌಲಭ್ಯ ನೀಡಲಾಗಿದೆ. ಶಿವಮೊಗ್ಗದಲ್ಲಿ ನಿವೇಶನ ಖರೀದಿಸಲಾಗಿದೆ. ಹಾಸನದಲ್ಲಿ ನೂತನ ಶಾಖೆ ಆರಂಭವಾಗಿದೆ. ವ್ಯವಹಾರಗಳು ಉತ್ತಮವಾಗಿ ನಡೆಯುತ್ತಿದ್ದು, ಈ ಮೂಲಕ ಬ್ಯಾಂಕಿನ ಗ್ರಾಹಕರಲ್ಲಿ ಹಂತ ಹಂತವಾಗಿ ನಂಬಿಕೆ ಮೂಡಿಸುತ್ತಿz್ದÉÃವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಧಾ ಎಚ್.ಆರ್‌ರಾಜು, ಸೌಭಾಗ್ಯ ಗೋಪಾಲನ್, ನಿರ್ದೇಶಕರಾದ ಕಮಲಾ ಬಸವರಾಜ್, ಸೌ¨sಜಯಶ್ರೀ ನಂಜರಾಜ್, ಟಿ.ಪಿ ಜಯಲಕ್ಷಿö್ಮÃ ರಾಮೇಗೌಡ, ಬನಶಂಕರಿ ಜೋಷಿ, ತಾರಾ ಮೋಹನ್, ಕವಿತಾ.ಎಂ.ರಾಹುಲ್ ನಾಯಕ್, ಮೀನಾ.ಪಿ, ಆಶಾ ಹೇಮಂತ್‌ಕುಮಾರ್, ಸ್ಮಿತಾ ಬಿ.ಎಂ, ಸೌಜನ್ಯ ಕೆ.ಆರ್, ಅರುಂಧತಿ ಎಚ್.ಎಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net