ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತತ್ವಪಾದಗಳ ಗೀತ ಗಾಯನ ಕಾರ್ಯಕ್ರಮ

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತತ್ವಪಾದಗಳ ಗೀತ ಗಾಯನ ಕಾರ್ಯಕ್ರಮ
Published on

ಹಾನಸ: ನಗರದ ಎಂ.ಜಿ. ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ಕನ್ನಡ ಮತ್ತು ಇಂಗ್ಲಿಷ್ ವಿಭಾಗ ಹಾಗೂ ನಿನಾದ ಕೂಟ ಇವರ ಸಹಯೋಗದಲ್ಲಿ ವಚನ, ಕೀರ್ತನೆ ಮತ್ತು ತತ್ವಪಾದಗಳ ಗೀತ ಗಾಯನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾರವರು ಸೇರಿದಂತೆ ಎಲ್ಲಾ ಗಣ್ಯರು ಉದ್ಘಾಟಿಸಿ ಗೀತ ಗಾಯನಕ್ಕೆ ಚಾಲನೆ ನೀಡಿದರು.
ಗೀತ ಗಾಯನ ಕಾರ್ಯಕ್ರಮದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಪುರಂದರದಾಸರು, ಶಿಶುನಾಳ ಶರೀಫ್ ಆಯ್ದ ಗೀತೆಗಳನ್ನು ಹಾಡಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಜನಪದ ಹಾಗೂ ತತ್ವಪದ ಗಾಯಕ ಬಿ.ಎನ್.ಮೋಹನ್ ಕುಮಾರ್ (ಅಜ್ಜಯ್ಯ) ಹಾಡುವ ಮೂಲಕ ಎಲ್ಲರ ಗಮನ ಸೆಳೆದರು. ಹಾಗೂ ಗಾಯನಕ್ಕೆ ತಬಲವಾದನವನ್ನು ತಬಲ ಕಲಾವಿದ ತಮ್ಮಯ್ಯ ರವರು ನುಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಎಚ್.ರಾಮೇಗೌಡ , ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಎಚ್.ಎನ್.ಹರೀಶ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಕೆ.ವೆಂಕಟೇಶ್, ನಿನಾದ ಕೂಟ ಸಂಚಾಲಕಿ ಡಾ.ಕೆ.ಬಿ.ಆಶಾ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಸ್.ಯೋಗೇಶ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆರ್.ಶಿಲ್ಪ ಶ್ರೀ, ಹಾಗೂ ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಎಲ್ಲಾ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net