

ಚಿತ್ರದುರ್ಗ: ಹೆಣ್ಣು ಮಗುವೆಂದರೆ ಸಡಗರ,ಪುರಾಣಗಳಲ್ಲಿ,ಬಸವಾದಿ ಶರಣರ ಕಾಲದಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇತ್ತು ಎಂದು ಎಸ್‌ಜೆಎಂಐಟಿ ಕಾಲೇಜು ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಹೇಳಿದರು. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ,ಮಹಿಳೆಯರು ಮನೆ ಹಾಗೂ ತಮ್ಮ ಕರ್ತವ್ಯದ ಸ್ಥಳದಲ್ಲಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ನಿವೃತ್ತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಮಾತನಾಡಿ,ಹೆಣ್ಣು ಮಕ್ಕಳಿಲ್ಲದ ಜಗತ್ತನ್ನು ಕಲ್ಪನೆ ಮಾಡಿಕೊಳ್ಳುವುದು ಅಸಾಧ್ಯ. ಲಿ ಂಗ ತಾರತಮ್ಯ ತೊಲಗಬೇಕು. ಮಹಿಳೆಯರಿಗೆ ಕಾನೂನು ಕುರಿತು ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು. ಮಹಿಳೆಯರು ಬೋನ್ಸಾಯ್ ಗಿಡವಾಗದೆ ಹೆಮ್ಮರವಾಗಬೇಕು. ವಿಧಾನಸಭೆ ಹಾಗೂ ಸಂಸತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಚುನಾಯಿತರಾಗ ಬೇಕೆಂದರು.
ಐಕ್ಯೂಎಸಿ ಸಂಚಾಲಕ ಡಾ.ಎ.ಎಂ.ರಾಜೇಶ್ ಮಾತನಾಡಿದರು.ಪುಷ್ಪಾ,ಪ್ರೊ.ಬಸಂತಕುಮಾರಿ,ಪ್ರೊ.ಬೀನಾ ಶೆರಿಲ್, ಪ್ರೊ.ಎನ್.ಪವಿ ತ್ರಾ ಮತ್ತಿತರರು ಇದ್ದರು. ಆಕಾಂಕ್ಷಾ ಪ್ರಾರ್ಥಿಸಿದರು. ಎ.ಶ್ರೇಯಾ ಸ್ವಾಗತಿಸಿ,ಬಿ.ಬಿ.ಜುಲೇಖ ವಂದಿಸಿದರು. ಕೇಸರ್‌ಮಲನ್,ವಿದ್ಯಾ ನಿ ರೂಪಿಸಿದರು.