ಮಹಿಳಾ ರತ್ನ ಪ್ರಶಸ್ತಿ ಪ್ರದಾನ

24spt4
Published on

ಸೋಮವಾರಪೇಟೆ: ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಷನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ನೀಡುವ ಮಹಿಳಾ ರತ್ನ -2025 ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸೋಮವಾರಪೇಟೆಯ ಗೀತಾಂಜಲಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಈಸ್ಟ್ ಕಲ್ಚರಲ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಬೆಂಗಳೂರು ಸಹಾಯಕ ಪೊಲೀಸ್ ಕಮಿಷನರ್ ರಂಗಪ್ಪ, ಟಿವಿ 9 ನಿರೂಪಕಿ ಸುಕನ್ಯಾ, ಸ್ವರ್ಣ ಭಾರತ್ ಫೌಂಡೇಷನ್ ಅಧ್ಯಕ್ಷೆ ಡಾ.ರಜನಿ ಸಂತೋಷ್ ಸೇರಿದಂತೆ ಹಲವು ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net